ಜಾತಿವಾದಿಗಳಿಂದ ಎಚ್ಚರದಿಂದಿರಿ: ಈಶ್ವರಪ್ಪ

7

ಜಾತಿವಾದಿಗಳಿಂದ ಎಚ್ಚರದಿಂದಿರಿ: ಈಶ್ವರಪ್ಪ

Published:
Updated:

ಬಾಗಲಕೋಟೆ: ಚುನಾವಣೆ ಸಮೀಪಿ ಸುತ್ತಿರುವುದರಿಂದ ಜಾತಿ ಹೆಸರಿನಲ್ಲಿ ಮತ ಕೇಳಲು ಬರುವ ಜಾತಿವಾದಿಗಳ ಬಗ್ಗೆ ಮತದಾರರು ಎಚ್ಚರದಿಂದ ಇರಬೇಕು ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು.ನವನಗರದ ಹೊಸದಾಗಿ ನಾಮ ಕರಣ ಮಾಡಲಾಗಿರುವ `ಕವಿರತ್ನ ಕಾಳಿದಾಸ' ವೃತ್ತವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ಹೋರಾಟಗಾರರು, ದಾರ್ಶನಿಕರು, ಸಮಾಜ ಸುಧಾರಕರು ಸಮಾಜ ಒಂದಾಗಬೇಕೆಂದು ಶ್ರಮಿಸಿ ದರು. ಆದರೆ, ಇಂದು ಬಸವಣ್ಣ ಲಿಂಗಾಯತರಿಗೆ, ಕನಕದಾಸ ಕುರು ಬರಿಗೆ, ಶಂಕರಾಚಾರ್ಯ ಬ್ರಾಹ್ಮಣ ರಿಗೆ, ವಾಲ್ಮೀಕಿ ಬೇಡರಿಗೆ ಸೀಮಿತ ಗೊಳಿಸುವ ಹುನ್ನಾರ ನಡೆ ಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.`ಲಿಂಗಾಯತನಾಗಿ ಹುಟ್ಟಿದ್ದೇ ತಪ್ಪಾ ಯಿತು' ಎನ್ನುತ್ತಾರೆ ಒಬ್ಬರು, `ಮುಂದಿನ ಜನ್ಮದಲ್ಲಿ ನಾನು ಮುಸ್ಲೀಂನಾಗಿ ಹುಟ್ಟುತ್ತೇನೆ' ಎಂದು ಹೇಳಿದ್ದರು ಇನ್ನೊಬ್ಬರು, ಇಂತಹ ರಾಜಕೀಯ ಹೇಳಿಕೆಗಳಿಗೆ ತಾತ್ಕಾಲಿಕ ಚಪ್ಪಾಳೆ ಮಾತ್ರ ಎಂದು ಪರೋಕ್ಷವಾಗಿ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ದೇವೇಗೌಡ ಅವರನ್ನು ಮೂದಲಿಸಿದರು.ಲಿಂಗಾಯತರ ನಾಯಕ ಯಡಿ ಯೂರಪ್ಪ, ಹಿಂದುಳಿ ದವರ ನಾಯಕ ಸಿದ್ದರಾಮಯ್ಯ ಎಂದು ಯಾರೊಬ್ಬರೂ ಭಾವಿಸುವ ಅಗತ್ಯವಿಲ್ಲ ಎಂದು ಹೇಳಿದರು.ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಮಾಜದ ಎಲ್ಲ ಜಾತಿ, ಮತ, ಧರ್ಮದ ಮಠಮಾನ್ಯಗಳಿಗೆ ಒಂದು ಸಾವಿರ ಕೋಟಿ ರೂಪಾಯಿ ಯನ್ನು ನೀಡುವ ಮೂಲಕ ಸಮಾನವಾಗಿ ಕಾಣಲಾಗಿದೆ ಎಂದು ಹೇಳಿದರು.ರಾಜ್ಯ ಸರ್ಕಾರ ರೈತರ ರೂ. 3200 ಕೋಟಿ ಸಾಲವನ್ನು ಮನ್ನಾ ಮಾಡಿರುವುದರಿಂದ ಸಮುದಾಯ ಭವನ ನಿರ್ಮಾಣದಂತಹ ಬೇರೆ ಉದ್ದೇಶಗಳಿಗೆ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ದಲಿತರು, ಹಿಂದುಳಿದವರು ಮೇಲ್ವರ್ಗ ಗಳೊಂದಿಗೆ ಸಮಾನವಾಗಿ ಬದುಕ ಬೇಕಾದರೆ ಕನಿಷ್ಠ 100 ವರ್ಷ ಕಳೆಯ ಬೇಕಾಗಿದೆ ಎಂದರು.

ಹಿಂದುಳಿದ ಮತ್ತು ದಲಿತ ಸಮುದಾಯಗಳು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಉನ್ನತ ಕೆಲಸಕ್ಕೆ ಕಳುಹಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.ಶಾಸಕ ವೀರಣ್ಣ ಚರಂತಿಮಠ, ನವನಗರದ ವಿವಿಧ ವೃತ್ತಗಳಿಗೆ ಕಾಳಿದಾಸ, ವಾಲ್ಮೀಕಿ, ಕಿತ್ತೂರು ಚನ್ನಮ್ಮನ ಹೆಸರಿಡಲು ತೀರ್ಮಾನಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸ ಲಾಗಿತ್ತು. ಇದೀಗ ಪ್ರಥಮವಾಗಿ ಕವಿರತ್ನ ಕಾಳಿದಾಸ ಹೆಸರು ಅನುಮೋದನೆಗೊಂಡಿದೆ ಎಂದರು.ಹಿಂದುಳಿದವರ ನಾಯಕ ಸಿದ್ದ ರಾಮಯ್ಯ ಎಂಬ ಕಾಲ ಮುಗಿಯಿತು, ಇನ್ನೇನಿದ್ದರೂ ಈಶ್ವರಪ್ಪನವರ ಕಾಲ ಎಂದು ಹೇಳಿದ ಅವರು, ಈಶ್ವರಪ್ಪನವರು ಹಲವು ಗೊಂದಲದ ನಡುವೆ ಬಿಜೆಪಿಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ಲಾಘಿಸಿದರು.ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಮತ್ತು ಜಿಲ್ಲಾ ಹಾಲುಮತ ಸಮಾಜದ ವತಿಯಿಂದ ಈಶ್ವರಪ್ಪ ಅವರನ್ನು ಅಭಿನಂದಿಸಲಾಯಿತು.ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ನಗರಸಭೆ ಅಧ್ಯಕ್ಷೆ ಭೀಮಾಬಾಯಿ ವಡ್ಡರ, ಉಪಾಧ್ಯಕ್ಷ ಶರಣಪ್ಪ ಗುಳೇದ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣ ಓಗೆಣ್ಣವರ, ಬಿಟಿಡಿಎ ಅಧ್ಯಕ್ಷ ಸಿ.ವಿ.ಕೋಠಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಶ್ರೀಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಎಸ್.ಭೈರಮಟ್ಟಿ, ಗೌರವ ಅಧ್ಯಕ್ಷ ಎಸ್.ಎಸ್.ಪಾಟೀಲ, ಬಸವರಾಜ ಯಮನಾಳ, ಬಸವರಾಜ ಸಿದ್ಲಿಂಗಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry