ಜಾತಿ ಆಧಾರದ ಪಕ್ಷ ಉಳಿಯಲ್ಲ: ಶಾಸಕ

7

ಜಾತಿ ಆಧಾರದ ಪಕ್ಷ ಉಳಿಯಲ್ಲ: ಶಾಸಕ

Published:
Updated:

ತುಮಕೂರು: ಜಾತಿ ಪದ್ಧತಿ ದೊಡ್ಡ ಈ ದೇಶದ ದುರಂತ. ಜಾತಿ ಮೇಲೆ ನಿಲ್ಲುವ ಪಕ್ಷ ಅಥವಾ ಸಂಸ್ಥೆ ಉಳಿಯುವುದಿಲ್ಲ ಎಂದ ಶಾಸಕ ಬಿ.ಸುರೇಶ್‌ಗೌಡ ಹೇಳಿದರು.ತಾಲ್ಲೂಕಿನ ಹೊನ್ನುಡಿಕೆ ಗ್ರಾಮ­ದಲ್ಲಿ ಈಚೆಗೆ ನಡೆದ ಸನ್ಮಾನ ಸಮಾರಂಭ­ದಲ್ಲಿ ಬೆಳ್ಳಿ ಗದೆ ಸ್ವೀಕರಿಸಿ ಮಾತನಾಡಿದ ಅವರು, ಹೆಬ್ಬೂರು– ಗೂಳೂರು ಏತ ನೀರಾವರಿ ಯೋಜನೆಯಿಂದ 14 ವರ್ಷದ ನಂತರ ಹೊನ್ನುಡಿಕೆ ಕೆರೆ ತುಂಬಿದೆ ಎಂದರು.ಗೂಳೂರು ಏತ ನೀರಾವರಿ ಯೋಜನೆ­ಯಿಂದ ಹೊನ್ನುಡಿಕೆ ಕೆರೆಗೆ ಸತತವಾಗಿ ನೀರು ಹರಿಸಲಾಗಿದೆ.  ವೀರನಾಯಕನ­ಹಳ್ಳಿ, ಹುಳ್ಳೇನಹಳ್ಳಿ, ಹೊಳಕಲ್ಲು, ಮುಳುಕುಂಟೆ, ಸಾಸಲು, ಅಮಾನಿಕೆರೆ­ಗಳಿಗೆ ಹೇಮಾವತಿ ನೀರು ಹರಿಸಲಾಗಿದೆ ಎಂದು ತಿಳಿಸಿದರು.

ಶಾಂತವೀರ ಸ್ವಾಮೀಜಿ, ತಾ.ಪಂ. ಸದಸ್ಯೆ ಭಾರತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜು, ಮಖಂಡರಾದ ಆನಂದಪ್ಪ, ಯೋಗೀಶ್, ಸಿದ್ದೇಗೌಡ, ಸಾಸಲುಮೂರ್ತಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry