ಜಾತಿ ಕಲಮು ತೆಗೆಸಿ

7

ಜಾತಿ ಕಲಮು ತೆಗೆಸಿ

Published:
Updated:

ಪ್ರಪ್ರಥಮವಾಗಿ ಈ ಜಾತಿ ಪದ್ಧತಿ ಹೋಗಲಾಡಿಸಬೇಕಾದರೆ ಶಾಲಾ, ಕೆಲಸ ಇತ್ಯಾದಿ ಅರ್ಜಿಗಳಲ್ಲಿ `ಜಾತಿ' ಎಂಬ ಕಲಮನ್ನು ತೆಗೆಯಬೇಕು. ಇಲ್ಲದೆ ಇದ್ದರೆ ಕಳೆದ ಸೋಮವಾರದ ನಿಮ್ಮ ಲೇಖನದ ಚಿತ್ರದಲ್ಲಿ ತೋರಿಸಿರುವಂತೆ ಅಲ್ಲಲ್ಲೇ ಸುತ್ತಾಡುತ್ತಾ ಕೊನೆ ಇಲ್ಲದ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ.ಜಾತಿ ಅನಿವಾರ್ಯವಲ್ಲ. ಜಾತಿಗಿಂತ ಮುಖ್ಯವಾಗಿ ವ್ಯಕ್ತಿಯು ತಾನು ಮಾಡುವ ಕಾಯಕದಲ್ಲಿ ಶ್ರದ್ಧೆ, ಪ್ರಾಮಾಣಿಕನಾಗಿರುವುದು ಮುಖ್ಯ. ಯಾವ ಜಾತಿ ಎಂಬುದು ನನಗೆ ಮುಖ್ಯವಲ್ಲ. ನಾನು ನಡೆಸುತ್ತಿರುವ ಮುದ್ರಣಾಲಯದಲ್ಲಿ ಎಲ್ಲ ಜಾತಿಯವರೂ ಇದ್ದಾರೆ. ನಾನು ಒಬ್ಬನೇ ಇರುವುದರಿಂದ ಅವರು ತಂದಿರುವ ಆಹಾರವನ್ನು ಕೊಡುತ್ತಾರೆ. ನಾನು ತಿನ್ನುತ್ತೇನೆ. ಆದರೆ ಮಾಂಸಾಹಾರ ಮಾತ್ರ ಬೇಡ ಎನ್ನುತ್ತೇನೆ. ಈ ರೀತಿ ನಾವೆಲ್ಲಾ ಅನ್ಯೋನ್ಯವಾಗಿದ್ದೇವೆ. ಈಗ ಹೇಳಿ ನಾನು ಯಾವ ಜಾತಿ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry