ಜಾತಿ ನಿಂದಿಸಿ ಹಲ್ಲೆ: 4 ಆರೋಪಿಗಳಿಗೆ ಜೈಲು

7

ಜಾತಿ ನಿಂದಿಸಿ ಹಲ್ಲೆ: 4 ಆರೋಪಿಗಳಿಗೆ ಜೈಲು

Published:
Updated:

ಗುಲ್ಬರ್ಗ: ಜಾತಿ ನಿಂದನೆ ಹಾಗೂ ದೌರ್ಜನ್ಯ ಎಸಗಿದ ನಾಲ್ಕು ಆರೋಪಿಗಳಿಗೆ ಮೂರು ವರ್ಷ ಮೂರು ತಿಂಗಳು ಜೈಲು ಹಾಗೂ ತಲಾ ಸಾವಿರ ರೂಪಾಯಿ ದಂಡ ವಿಧಿಸಿ 2ನೇ ಅಪರ ಜಿಲ್ಲಾ ಮತ್ತು ವಿಶೇಷ ಸೆಷನ್ಸ್ ನ್ಯಾಯಾಧೀಶ ಬಸವರಾಜ ಬೆಳವಗಿ ಗುರುವಾರ ತೀರ್ಪು ನೀಡಿದ್ದಾರೆ.ವಿಜಯಕುಮಾರ ವಿಶ್ವನಾಥ ಸಿದ್ದಣ್ಣನವರ್, ಶಿವಕುಮಾರ ಗುರುಸಿದ್ದಪ್ಪ ಸಿದ್ದಣ್ಣನವರ್, ಸಿದ್ದು ಶಿವನಗೌಡ ಸಿದ್ದಣ್ಣನವರ್ ಮತ್ತು ರಾಮು ಶಿವನಗೌಡ ಸಿದ್ದಣ್ಣನವರ್ ಶಿಕ್ಷೆಗೆ ಗುರಿಯಾದವರು.ಆರೋಪಿಗಳು 2010ರ ಜುಲೈ 13ರಂದು ತಾಲ್ಲೂಕಿನ ಹೇರೂರ(ಬಿ) ಗ್ರಾಮದಲ್ಲಿ ದೌಲಪ್ಪ ನಾಗಪ್ಪ ಮತ್ತು ಇತರರ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದರು. ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿ ಪೊಲೀಸ್ ಉಪ ಅಧೀಕ್ಷಕ ಬಿ.ಎಂ.ಹೂಗಾರ ದೋಷಾರೋಪಣ ಪತ್ರ ಸಲ್ಲಿಸಿದ್ದರು.ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ ಕಲಂ 323, 324, 504, 34 ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ( ದೌರ್ಜನ್ಯ ತಡೆ) ಕಾಯ್ದೆಯ ಕಲಂ 3(1)(10)ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಸರ್ಕಾರದ ಪರವಾಗಿ 2ನೇ ಅಪರ ಮತ್ತು ವಿಶೇಷ ಸರ್ಕಾರಿ ಅಭಿಯೋಜಕ ದೇವಾಪೂರ ವೆಂಕಣ್ಣ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry