ಶನಿವಾರ, ನವೆಂಬರ್ 23, 2019
18 °C

`ಜಾತಿ ನೋಡಿ ಮತ ಹಾಕಬೇಡಿ'

Published:
Updated:

ಪಾವಗಡ: ಜಾತಿ ನೋಡಿ ಮತ ಹಾಕಬೇಡಿ. ಅಭ್ಯರ್ಥಿಯ ವ್ಯಕ್ತಿತ್ವವನ್ನರಿತು ಮತ ಚಲಾಯಿಸಿ ಎಂದು ಮಾಜಿ ಶಾಸಕ ತಿಮ್ಮರಾಯಪ್ಪ ಮನವಿ ಮಾಡಿದರು.ತಾಲ್ಲೂಕಿನ ಕಣಿವೇನಹಳ್ಳಿಯಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ನನ್ನ ವಿರುದ್ಧ ಜಾತಿ ಆಧಾರದ ಮೇಲೆ ಹಲ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಹುನ್ನಾರ ನಡೆಸುತ್ತಿದೆ. ಇದರಿಂದ ಮತಗಳು ವಿಭಜನೆಯಾಗಿ ಅನ್ಯ ಪಕ್ಷಗಳ ಅಭ್ಯರ್ಥಿಗೆ ಅನುಕೂಲವಾಗುತ್ತದೆ ಎಂದು ಇತರೆ ಪಕ್ಷಗಳ ಮುಖಂಡರು ಪ್ರಚಾರ ನಡೆಸುತ್ತಿದ್ದಾರೆ. ಮತದಾರರು ಜಾತಿ, ಹಣ, ಹೆಂಡದ ಆಮಿಷಗಳಿಗೆ ಬಲಿಯಾಗದೆ ಉತ್ತಮ ವ್ಯಕ್ತಿತ್ವ ಹಾಗೂ ತಾಲ್ಲೂಕಿನ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವ ಅಭ್ಯರ್ಥಿಯನ್ನು ಚುನಾಯಿಸಬೇಕು ಎಂದು ಕೋರಿದರು.ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತಿಮ್ಮೋರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಸಿ.ಅಂಜಿನಪ್ಪ, ಬಲರಾಮರೆಡ್ಡಿ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷ ನರಸಿಂಹಮೂರ್ತಿ, ಸದಸ್ಯ ರಾಮಕೃಷ್ಣಾರೆಡ್ಡಿ, ಅಶ್ವಥಪ್ಪ, ವೆಂಕಟನಾಯ್ಕ, ಹನುಮಂತರೆಡ್ಡಿ ಇತರರು ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡರು.ಜೆಡಿಎಸ್ ತಾಲ್ಲೂಕು ಉಪಾಧ್ಯಕ್ಷ ಅಶ್ವಥನಾರಾಯಣಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಶಂಕರರೆಡ್ಡಿ, ಎ.ವೆಂಕಟರಾಮರೆಡ್ಡಿ, ಎಸ್.ಕೆ.ರೆಡ್ಡಿ, ಪುರಸಭೆ ಸದಸ್ಯ ವಸಂತಕುಮಾರ್, ಸುಧಾಕರ ರೆಡ್ಡಿ, ತಾಲ್ಲೂಕು ವಕ್ತಾರ ಅಕ್ಕಲಪ್ಪ ನಾಯ್ಡು, ರಾಜವಂತಿ ರಂಗನಾಥ್, ಮಲ್ಲಿಕಾರ್ಜುನ ಇತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)