ಶುಕ್ರವಾರ, ಏಪ್ರಿಲ್ 23, 2021
22 °C

ಜಾತಿ ಪಂಚಾಯಿತಿ ಪರ ಸಂಸದ ಜಯಂತ್ ವಕಾಲತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಜಾತಿ ಪಂಚಾಯಿತಿಗಳ ನಿರ್ಧಾರಗಳನ್ನು `ನಿರ್ದೇಶನ~ ಎಂದು ಪರಿಗಣಿಸಬೇಕೇ ಹೊರತು `ಹುಕುಂ~ ಅಥವಾ `ಆಜ್ಞೆ~ ಎಂದು ಭಾವಿಸಬಾರದು ಎಂದು ಆರ್‌ಎಲ್‌ಡಿ ಸಂಸದ ಜಯಂತ್ ಚೌಧರಿ ಹೇಳಿದ್ದಾರೆ.ಬಾಗ್‌ಪಥ್ ಗ್ರಾಮದ ಜಾತಿ ಪಂಚಾಯಿತಿಯು ಮಹಿಳೆಯರ ವಿರುದ್ಧ ಕೆಲವು ಕಟ್ಟುಪಾಡುಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಅವರು ಹೀಗೆ ಹೇಳಿದ್ದಾರೆ.`ಕುಟುಂಬದ ಹಿರಿಯರೊಬ್ಬರು ಅವರ ಮನೆಯಲ್ಲಿ ಅಭಿಪ್ರಾಯ ಮಂಡಿಸುವುದು ಅವರ ಹಕ್ಕಾಗಿರುತ್ತದೆ. ಅದನ್ನು ಪಾಲಿಸಬೇಕೋ, ಬಿಡಬೇಕೋ ಎಂಬುದು ಆ ಮನೆಯವರ ನಿರ್ಧಾರಕ್ಕೆ ಬಿಟ್ಟ ಸಂಗತಿ~ ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಪುತ್ರರಾದ ಜಯಂತ್ ಸಮರ್ಥಿಸಿಕೊಂಡಿದ್ದಾರೆ.ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆಯಂತಹ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸಲು ಜಾತಿ ಪಂಚಾಯಿತಿ ಹಾಗೂ ಗ್ರಾಮದ ಹಿರಿಯರಿಂದ ಸಾಕಷ್ಟು ಶ್ರಮ ವಿನಿಯೋಗವಾಗುತ್ತಿದೆ ಎಂದು ಜಯಂತ್ ಇದೇ ವೇಳೆ ಹೇಳಿದ್ದಾರೆ.

ಉತ್ತರ ಪ್ರದೇಶದ ಬಾಗ್‌ಪಥ್‌ನ ಪಂಚಾಯಿತಿಯಲ್ಲಿ, ಪ್ರೇಮ ವಿವಾಹ ನಿಷೇಧ, 40 ವರ್ಷದೊಳಗಿನ ಮಹಿಳೆಯರಿಗೆ ಅಂಗಡಿ ಮುಂಗಟ್ಟುಗಳಿಗೆ ಹೋಗುವುದಕ್ಕೆ ನಿರ್ಬಂಧ ಹಾಗೂ ಮನೆಯಿಂದ ಹೊರಗೆ ಮೊಬೈಲ್ ಬಳಕೆ ನಿಷೇಧಿಸಿ ಕಟ್ಟುಪಾಡು ವಿಧಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.