ಭಾನುವಾರ, ಏಪ್ರಿಲ್ 18, 2021
23 °C

ಜಾತಿ, ಭ್ರಷ್ಟಾಚಾರ ರಾಷ್ಟ್ರದ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ‘ನಮ್ಮ ಸಮಾಜವನ್ನು ಜಾತಿ ಹಾಗೂ ಭ್ರಷ್ಟಾಚಾರಗಳು ಮೂಲಸಮಸ್ಯೆಗಳಾಗಿ ಕಾಡುತ್ತಿವೆ. ಜಾತಿ ಸಮಸ್ಯೆ ಹೋಗದ ಹೊರತು ಭ್ರಷ್ಟಾಚಾರ ತೊಲಗದು’ ಎಂದು ಪಟ್ಟಣದ ಹಿರಿಯ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಅಭಿಪ್ರಾಯಪಟ್ಟರು.ಸೋಮವಾರ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕೃಷಿಕ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೀಜ ಅಧಿನಿಯಮಗಳ ಕಾಯ್ದೆ, ಗ್ರಾಹಕರ ರಕ್ಷಣಾ ವೇದಿಕೆ ವಿಷಯ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಾರ್ವಜನಿಕರಿಗೆ ಕೇವಲ ಕಾನೂನಿನ ಅರಿವು ಇದ್ದರೆ ಸಾಲದು ಎಂದ ಅವರು, ಕಾನೂನಿನ ಪರಿಣಾಮಕಾರಿ, ನಿಷ್ಪಕ್ಷಪಾತವಾಗಿ ಜಾರಿಮಾಡುವುದು ಮುಖ್ಯ ಎಂದರು.

ಹಣ, ಹೆಂಡ, ಜಾತಿಯ ಮೂಲಕ ಚುನಾವಣೆ ಗೆದ್ದು, ಆಡಳಿತ ನಡೆಸುವ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯ ಆಗದಷ್ಟು ವ್ಯವಸ್ಥೆ ಹದಗೆಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ. ಬಸವರಾಜಗೌಡ ಮಾತನಾಡಿ, ಕಳಪೆ ಬಿತ್ತನೆ ಬೀಜ, ಕಂದಾಯ ಇಲಾಖೆಯಲ್ಲಿ ದಾಖಲಾತಿಗಳ ಸಂಗ್ರಹಣೆ ರೈತರಿಗೆ ಬಹು ದೊಡ್ಡ ಸಮಸ್ಯೆಗಳಾಗಿವೆ ಎಂದರು.ಕಿರಿಯ ವಿಭಾಗದ ನ್ಯಾಯಾಧೀಶ ರವೀಂದ್ರ ಡಿ. ಅರಿ. ಎಜಿಪಿ ಎಂ.ಡಿ. ಮಾಂಗ್ಲಿ, ಸಹಾಯಕ ಕೃಷಿ ನಿರ್ದೇಶಕ ಡಿ. ಕೃಷ್ಣಮೂರ್ತಿ, ಕೃಷಿಕ ಸಮಾಜದ ನಿರ್ದೇಶಕರಾದ ಶಾಂತಮ್ಮ, ಗಂಗಮ್ಮ ಉಪಸ್ಥಿತರಿದ್ದರು.ಹಿರಿಯ ವಕೀಲರಾದ ಇಂದುಧರ ಒಡೆಯರ್ ಬೀಜ ಅಧಿನಿಯಮಗಳ ಕಾಯ್ದೆ ಬಗ್ಗೆ, ಎಂ. ನಾಗಪ್ಪ ಗ್ರಾಹಕರ ರಕ್ಷಣಾ ಕಾಯ್ದೆ ಹಾಗೂ ಕಂದಾಯ ಇಲಾಖೆಯ ಶಂಭುಲಿಂಗ ಭೂ ದಾಖಲೆಗಳು ಹಾಗೂ ರೈತರು ವಿಷಯದ ಕುರಿತು ಉಪನ್ಯಾಸ ನೀಡಿದರು.ವಕೀಲರ ಸಂಘದ ಅಧ್ಯಕ್ಷ ವೈ.ಜಿ. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಕೆ. ನಾಗರಾಜ್ ಸ್ವಾಗತಿಸಿದರು. ಸುಧಾಕರ ಪಿ. ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.