ಜಾತಿ ವ್ಯವಸ್ಥೆ ಇಂದಿಗೂ ಜೀವಂತ: ವಿಷಾದ

7

ಜಾತಿ ವ್ಯವಸ್ಥೆ ಇಂದಿಗೂ ಜೀವಂತ: ವಿಷಾದ

Published:
Updated:

ಮೈಸೂರು: ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿಯನ್ನು ನಿರ್ಮೂಲನೆಗೆ ಡಾ.ಬಿ.ಆರ್. ಅಂಬೇಡ್ಕರ್ ಜೀವನವಿಡೀ ಹೋರಾಟ ನಡೆಸಿದರು. ಆದರೆ ಜಾತಿ ಇಂದಿಗೂ ಜೀವಂತವಾಗಿದ್ದು, ಸಂಕೀರ್ಣವಾಗು ತ್ತಿದೆ ಎಂದು ಪಾಂಡಿಚೆರಿ ವಿಶ್ವವಿದ್ಯಾ ನಿಲಯದ ವಿಶ್ರಾಂತ ಕುಲಪತಿ ವಿ.ಟಿ.ಪಾಟೀಲ ವಿಷಾದಿಸಿದರು.ಮೈಸೂರು ವಿಶ್ವವಿದ್ಯಾನಿಲಯದ ಇ.ಎಂ.ಎಂ.ಆರ್.ಸಿ. ಸಭಾಂಗಣದಲ್ಲಿ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ವತಿಯಿಂದ ಸೋಮವಾರ ಏರ್ಪಡಿಸಿದ್ದ ದಿವಂಗತ ಎಂ.ಮಲ್ಲಿಕಾರ್ಜುನಸ್ವಾಮಿ ದತ್ತಿ ಉಪನ್ಯಾಸದಲ್ಲಿ `ದಲಿತರ ಸಬಲೀಕರಣ- ಡಾ.ಬಿ.ಆರ್. ಅಂಬೇಡ್ಕರ್ ದೃಷ್ಟಿಕೋನ' ಕುರಿತು ಮಾತನಾಡಿದರು.ಕೇವಲ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಸಾಧಿಸಿದರೆ ದಲಿತರ ಉದ್ಧಾರ ಸಾಧ್ಯವಿಲ್ಲ. ರಾಜಕೀಯ ಸಬಲೀಕರಣವೂ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ ಅಂಬೇಡ್ಕರ್ ವಿಚಾರಧಾರೆಗಳಿಗೆ ಕಳೆದ 3-4 ದಶಕಗಳಿಂದ ಹೆಚ್ಚು ಮನ್ನಣೆ ದೊರಕುತ್ತಿದೆ. ಉತ್ತಮ ಸಂವಿಧಾನ ದಿಂದ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ ಭಾವನೆಗಳನ್ನು ಬೆಳೆಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ಮೂಲಭೂತ ಹಕ್ಕುಗಳನ್ನು ಸಂವಿಧಾನ ದಲ್ಲಿ ಅಳವಡಿಸಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry