ಜಾತಿ ವ್ಯವಸ್ಥೆ ಹಿಂದೂ ಧರ್ಮಕ್ಕೆ ಶತ್ರು

7

ಜಾತಿ ವ್ಯವಸ್ಥೆ ಹಿಂದೂ ಧರ್ಮಕ್ಕೆ ಶತ್ರು

Published:
Updated:

ಮೂಡಿಗೆರೆ: ಹಿಂದೂ ಧರ್ಮಕ್ಕೆ ಜಾತಿ ವ್ಯವಸ್ಥೆ ಶತ್ರು ಎಂದು ಮುಜರಾಯಿ ಸಚಿವ ಕೋಟಾ ಶ್ರಿನಿವಾಸ ಪೂಜಾರಿ ಹೇಳಿದರು.ಪಟ್ಟಣದ ಗಂಗನಮಕ್ಕಿಯಲ್ಲಿ ಬ್ರಹ್ಮಶ್ರಿ ನಾರಾ ಯಣ ಗುರು ಸಮಾಜ ಸೇವಾ ಸಂಘ ಭಾನುವಾರ ಏರ್ಪಡಿಸಿದ್ದ ಬ್ರಹ್ಮಶ್ರಿ ನಾರಾಯಣ ಗುರುಗಳ 158 ನೇ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತ ನಾಡಿದರು.ನಾರಾಯಣ ಗುರುಗಳು ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ಬಲವಾಗಿ ಖಂಡಿಸಿ ಅಸ್ಪೃಶ್ಯತೆಯನ್ನು ಸಮಾಜದಿಂದ ಹೊರ ಹಾಕುವ ನಿಟ್ಟಿನಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದರು. ಸಮಾಜ ದಲ್ಲಿ ಸರ್ವರನ್ನೂ ಸಮಾನವಾಗಿ ಕಾಣುವ ಗುಣ ಬೆಳೆಸಿ ಕೊಂಡಾಗ ನಾರಾಯಣ ಗುರುಗಳ ಮಾರ್ಗವನ್ನು ಅನುಸರಿಸಿ ದಂತಾಗುತ್ತದೆ ಎಂದರು.ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಬಿಲ್ಲವ ಸಮಾಜದಲ್ಲಿ ಪ್ರತಿಭಾವಂತರಿದ್ದು, ಸಮಾಜದ ಆರ್ಥಿಕ ಬೆಳವಣಿಗೆಯಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ. ಜಾತಿ, ಮತ ಯಾವುದಾದರೂ ಮಾನವೀ ಯತೆ ಬಲಗೊಳ್ಳಬೇಕು ಎಂದರು. ನಾರಾಯಣ ಗುರುಗಳು ಸಮಾಜದ ಕೆಳವರ್ಗದವರಿಗೆ ಧೈರ್ಯ ತುಂಬಿ, ಶಕ್ತಿ ನೀಡಿ ಮಾರ್ಗದರ್ಶನ ತೋರಿದವರು ಪ್ರತಿಯೊಬ್ಬರೂ ಸಮಾನತೆಯ ತತ್ವವನ್ನು ಅಳವಡಿಸಿ ಕೊಂಡರೆ ಜೀವನ ಪ್ರಗತಿ ಹೊಂದುತ್ತದೆ ಎಂದರು.ಸಂಘದ ಗೌರವ ಅಧ್ಯಕ್ಷ ಧರಣಪ್ಪ ಪೂಜಾರಿ ಮಾತನಾಡಿ, ಶಿಕ್ಷಣದಿಂದ ಸ್ವಾತಂತ್ರ್ಯ ದೊರಕಿದರೂ ಬಲವಾಗಲು ಸಂಘಟನೆ ಅಗತ್ಯ. ಸಂಘಟಿತರಾಗದೆ ಜನಾಂಗದ ಜೀವನ ಮಟ್ಟ ಸುಧಾರಿಸಲು ಸಾಧ್ಯ ವಾಗದು ಎಂದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ, ದೇವ್‌ದಾಸ್ ಕಟ್ಟೇಮಾರ್, ಬೋಜ ಪೂಜಾರಿ, ರಾಜು ಕಾರ್ಕಳ, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಪಪಂ ಅಧ್ಯಕ್ಷೆ ಲತಾ ಲಕ್ಷ್ಮಣ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎನ್. ಜಯಂತ್, ಜೆಡಿಎಸ್‌ತಾಲ್ಲೂಕು ಘಟಕದ ಅಧ್ಯಕ್ಷ ಉಮಾಪತಿ, ಜಿಪಂ ಸದಸ್ಯ ಎಂ.ಎಸ್. ಅನಂತ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ತಾ.ಪಂ. ಸದಸ್ಯ ಶೇಷಗಿರಿ, ಬಿಲ್ಲವ ವೇದಿಕೆಯ ಕೇಶವ ಪೂಜಾರಿ, ಟೈಲರ್ ರಘು, ಸಂದೀಪ್ ಮತ್ತಿತರರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry