ಜಾತಿ ಸಮೀಕ್ಷೆ: ನ.20ರಿಂದ ಆರಂಭ

7

ಜಾತಿ ಸಮೀಕ್ಷೆ: ನ.20ರಿಂದ ಆರಂಭ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆ ನವೆಂಬರ್ 20ರಿಂದ ಡಿಸೆಂಬರ್ 30ರವರೆಗೆ ನಡೆಯಲಿದೆ.ರಾಜ್ಯದ 16 ಜಿಲ್ಲೆಗಳಲ್ಲಿ ನವೆಂಬರ್ 1ರಿಂದ ಡಿಸೆಂಬರ್ 10 ರವರೆಗೆ ನಡೆಯಲಿದೆ. ಇನ್ನುಳಿದ 14 ಜಿಲ್ಲೆಗಳಲ್ಲಿ ನವೆಂಬರ್ 20ರಿಂದ ಡಿಸೆಂಬರ್ 30 ರವರೆಗೆ ಜಾತಿ ಸಮೀಕ್ಷೆ ನಡೆಸಲು ತೀರ್ಮಾನಿಸ ಲಾಗಿದ್ದು,  ಇದಕ್ಕೆ ಸಕಲ ಪೂರ್ವ ಸಿದ್ಧತೆ ಮಾಡಿಕೊಳ್ಳ ಬೇಕೆಂದು ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಗುರುವಾರ ನಡೆದ ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಸಮೀಕ್ಷೆ ಕುರಿತಂತೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.ಈವರೆಗಿನ ಸಿದ್ಧತೆ ತೃಪ್ತಿಕರವಾಗಿಲ್ಲ, ಮುಂದೆ ಯಾದರೂ ತ್ವರಿತವಾಗಿ ವೇಳಾ ಪಟ್ಟಿವಾರು ಕಾರ್ಯಕ್ರಮ ಅನು ಷ್ಠಾನಕ್ಕೆ ಸೂಕ್ತ ಯೋಜಿತ ಪ್ರಯತ್ನ ನಡೆಸುವಂತೆ ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಧಿಕಾರಿ ಹಾಗೂ ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಗಣತಿಗೆ ಬೇಕಾದ ಅಂದಾಜು ವೆಚ್ಚ ಗಳ ಪಟ್ಟಿ ಸಿದ್ಧಪಡಿಸುವುದು. ಜಿಲ್ಲಾ ಮಟ್ಟದ ತರಬೇತಿಗೆ ಅಗತ್ಯವಿರುವ ಬೋಧನಾ ಸಾಮಗ್ರಿಗಳನ್ನು ಒದಗಿಸು ವುದು. ಕೂಡಲೇ ಗಣತಿ ಕಿಟ್ ಪೂರೈಕೆಗೆ ಸಂಬಂಧಿಸಿ ದಂತೆ ಅಲ್ಪಾವಧಿ ಟೆಂಡರ್ ಕರೆದು ಈ ತಿಂಗಳ ಅಂತ್ಯದೊಳಗೆ ಪೂರೈಕೆಯ ಷರತ್ತು ವಿಧಿಸಿ ನಿಯ ಮಾನುಸಾರ ಕ್ರಮವಹಿಸುವಂತೆ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜ ನಾಧಿಕಾರಿಗೆ ಸೂಚಿಸಿದರು.ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಎನ್ ಕೃಷ್ಣಪ್ಪ ಮಾತನಾಡಿ ಜಿಲ್ಲಾ ಪಂಚಾಯಿತಿ ವ್ಯವಸ್ಥೆ ಯಿಂದ ಈ ಗಣತಿ ಕಾರ್ಯಕ್ಕೆ ಅಗತ್ಯ ವಿರುವ ಎಲ್ಲಾ ಸಹಕಾರ ಒದಗಿಸಲು ತಾ.ಪಂ. ಕಾರ್ಯನಿರ್ವಹ ಣಾಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯಿತಿ ಹಂತದ ಎಲ್ಲಾ ಅಧಿಕಾರಿಗಳಿಗೆ ಸೂಚಿಸುವುದಾಗಿ ಅವರು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಮಾತ ನಾಡಿ, ಇದೊಂದು ಜನಗಣತಿಯಂತೆಯೇ ಪ್ರಮುಖ ಗಣತಿ ಕಾರ್ಯವಾಗಿದ್ದು, ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಬೇಕಿದೆ ಎಂದರು.ಸಹಾಯಕ ಯೋಜನಾಧಿಕಾರಿ ಶಬೀರ್ ಬಾಷ ಮಾತನಾಡಿ, ಈ ಗಣತಿ ಕಾರ್ಯಕ್ಕೆ ಈಗಾಗಲೇ ಅನುದಾನ ಕೇಂದ್ರ ಸರ್ಕಾರದಿಂದ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬಿಡುಗಡೆಯಾಗಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ನವೆಂಬರ್ 10 ರಿಂದ 16 ರವರೆಗೆ 2 ಹಂತಗಳಲ್ಲಿ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ತಾಲ್ಲೂಕು/ಹೋಬಳಿ ಹಂತಗಳಲ್ಲಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ರ ಮೇಲ್ವಿಚಾರಣೆಯಲ್ಲಿ ತರಬೇತಿ ನಡೆಸಲು ತಿರ್ಮಾನಿಸಲಾಯಿತು.ಜಿಲ್ಲೆಯಲ್ಲಿ ನವೆಂಬರ್ 2 ರಿಂದ 4 ರವರೆಗೆ ಜಿಲ್ಲಾ ಮಟ್ಟದ ತರಬೇತುದಾರರಿಗೆ ತರಬೇತಿ ನೀಡಲಾಗುವುದು ಮತ್ತು ನವೆಂಬರ್ 2 ರಂದು ಗಣತಿ ಕಿಟ್ ಸಿದ್ಧಪಡಿಸುವ ಕಾರ್ಯ ಮತ್ತು ನವೆಂಬರ್ 5ರಂದು ಜಿಲ್ಲಾವಾರು ಬೋಧನಾ ಸಾಮಾಗ್ರಿಗಳ ವಿತರಣೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry