`ಜಾತೀಯತೆಯಿಂದ ರಂಗಭೂಮಿ ಮುಕ್ತ'

7

`ಜಾತೀಯತೆಯಿಂದ ರಂಗಭೂಮಿ ಮುಕ್ತ'

Published:
Updated:
`ಜಾತೀಯತೆಯಿಂದ ರಂಗಭೂಮಿ ಮುಕ್ತ'

ಬೆಂಗಳೂರು: `ರಾಜಕೀಯ, ಭ್ರಷ್ಟಾಚಾರ ಮತ್ತು ಜಾತೀಯತೆಗಳ ಮುಖವಾಡದಿಂದ ಮುಕ್ತವಾಗಿರುವುದು ರಂಗಭೂಮಿ. ಆಧುನಿಕತೆಯ ಭರಾಟೆಯಲ್ಲಿ ನಾಟಕಗಳು ಮಸುಕಾಗಿರಬಹುದು. ರಂಗಭೂಮಿ ಎಂದಿಗೂ ಚೈತನ್ಯದಾಯಕವಾಗಿರುತ್ತದೆ' ಎಂದು ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ತಿಳಿಸಿದರು.ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯು ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಸಂಕ್ರಾತಿ ಸುಗ್ಗಿ' ಕಾರ್ಯಕ್ರಮದಲ್ಲಿ ಅವರು ಮಾತನಾಡಿ, `ವಿಶ್ವವಿದ್ಯಾಲಯಗಳು ತಿಳಿಸಿಕೊಡದೇ ಇರುವ ಜ್ಞಾನವನ್ನು ರಂಗಭೂಮಿ ಪರಿಣಾಮಕಾರಿಯಾಗಿ ತಿಳಿಸಬಲ್ಲದು' ಎಂದರು.ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ರಂಗಭೀಷ್ಮ ಏಣಗಿ ಬಾಳಪ್ಪ, `ಹೃದಯ ತುಂಬಿ ಬಂದದ. ಏನು ಹೇಳಬೇಕೋ ತಿಳಿವಲ್ದು. ಇಷ್ಟು ಮಂದಿ ಪ್ರೇಕ್ಷಕರನ್ನು ನೋಡಿ ಈ ಇಳಿವಯಸ್ಸನಾಗೂ ಪಾತ್ರ ಮಾಡಬೇಕೆಂಬ ಆಸಿ ಹುಟೈತ್ತಿ' ಎಂದು ತಿಳಿಸಿದರು.`ನಾಟಕಗಳು, ಗಮಕಗಳು ಜನಮಾನಸದಲ್ಲಿ ಎಂದಿಗೂ ಉಳಿಯುವಂತದ್ದು. ಈ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕು' ಎಂದು ಅವರು ಕಿವಿಮಾತು ಹೇಳಿದರು.ಸನ್ಮಾನ ರೂಪದಲ್ಲಿ ನೀಡಿದ ರೂ ಹತ್ತು ಸಾವಿರ ಚೆಕ್ ಅನ್ನು ಹಿಂತಿರುಗಿಸಿದರು. ಡಿ.ಎಸ್.ಸುರೇಶ್ ನಿರ್ದೇಶನದ `ಏಣಗಿ ಬಾಳಪ್ಪ ನೂರ್ಕಾಲ ಬಾಳಪ್ಪ' ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿ ಕೆ.ವಿ.ಆರ್.ಟ್ಯಾಗೋರ್, ರಂಗಕರ್ಮಿ ಪ್ರಕಾಶ್ ಬೆಳವಾಡಿ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry