ಜಾತ್ಯತೀತ ಮಂತ್ರ ಪಠಿಸಿದ ಸೋನಿಯಾ

7

ಜಾತ್ಯತೀತ ಮಂತ್ರ ಪಠಿಸಿದ ಸೋನಿಯಾ

Published:
Updated:

ಪಚ್‌ಪದಾರ (ರಾಜಸ್ತಾನ): ದೇಶದ ಸರ್ವಾಂಗೀಣ ಪ್ರಗತಿಯ ಜೊತೆಗೆ ಜಾತ್ಯತೀತ ನಂಬಿಕೆಗಳನ್ನೂ  ಉಳಿಸಿಕೊಂಡು ಹೋಗುವಂತೆ  ಮನವಿ ಮಾಡಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಬುರ್ಕಾ ಪಕ್ಷ ಎಂಬ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಗಳಿಗೆ ಪರೋಕ್ಷ ತಿರುಗೇಟು ನೀಡಿದರು. 

     

ಈ ದೇಶದ ವೈಶಿಷ್ಟ್ಯವಾದ ಜಾತ್ಯತೀತ ತತ್ವ, ಸಿದ್ಧಾಂತಗಳನ್ನು ಎಲ್ಲ ಸಮುದಾಯ, ವಗರ್ದವರು ಮುನ್ನಡೆಸಿಕೊಂಡು ಹೋಗಬೇಕಾಗಿದೆ ಎಂದು ಅವರು ಕರೆ ನೀಡಿದರು.37,230 ಕೋಟಿ ರೂಪಾಯಿ ವೆಚ್ಚದ ತೈಲ ಸಂಸ್ಕರಣಾ ಮತ್ತು ಪೆಟ್ರೋರಾಸಾಯನಿಕ ಸಂಕೀಣದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರ ಶಾಂತಿ ಮತ್ತು ಸಾಮರಸ್ಯದ ವಾತಾವರಣ ನಿಮಿರ್ಸಿದಲ್ಲಿ ತನ್ನಿಂದ ತಾನೇ ಎಲ್ಲ ವಿಧವಾದ ಅಭಿವೃದ್ಧಿ ಸಾಧ್ಯ. ಆಗ ಸಹಜವಾಗಿ ದೇಶದಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದರು.ಸಮಾಜದ ಎಲ್ಲ ಸಮುದಾಯ, ವರ್ಗಗಳು ಒಟ್ಟಾಗಿ ಮುನ್ನಡೆಯಬೇಕು. ಜಾತ್ಯತೀತ ತತ್ವ, ಸಿದ್ಧಾಂತಗಳೇ ಈ ದೇಶದ ಸಂಸ್ಕೃತಿ ಮತ್ತು ಆಡಳಿತದ ತಳಹದಿ ಎಂದರು.ಉತ್ತರ ಪ್ರದೇಶದ ಮುಜಫ್ಫರ್‌ ನಗರ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಯ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry