ಬುಧವಾರ, ಏಪ್ರಿಲ್ 21, 2021
25 °C

ಜಾತ್ರಾ ಮಹೋತ್ಸವ:

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಗಡಿ ರಸ್ತೆಯ ಅಂಗಾಳ ಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಶುಕ್ರವಾರ (ಮಾ.4) ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಹಲವೆಡೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.ಜಾತ್ರಾ ಮಹೋತ್ಸವದ ಪ್ರಯುಕ್ತ ಅಂಗಾಳ ಪರಮೇಶ್ವರಿ ದೇವಸ್ಥಾನದಿಂದ ಹುಣಸೇಮರ ವೃತ್ತ, ಕೆ.ಬಿ.ಜಂಕ್ಷನ್, ಆರ್.ಆರ್.ವೃತ್ತ, ಶ್ರೀರಾಮಪುರ ಮುಖ್ಯರಸ್ತೆ ಮಾರ್ಗವಾಗಿ ದೇವಯ್ಯ ಪಾರ್ಕ್ ರುದ್ರಭೂಮಿವರೆಗೆ ಮೆರವಣಿಗೆ ನಡೆಯುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚುವ ಸಾಧ್ಯತೆ ಇದೆ.ಆದ್ದರಿಂದ ವಾಹನ ಸವಾರರು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ ಏಳು ಗಂಟೆವರೆಗೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.ಮೈಸೂರು ವೃತ್ತದ ಕಡೆಯಿಂದ ಹುಣಸೇಮರ ವೃತ್ತದ ಕಡೆಗೆ ಹೋಗಬೇಕಾದ ವಾಹನಗಳು ಬಿನ್ನಿಮಿಲ್ ವೃತ್ತದಲ್ಲಿ ಬಲಕ್ಕೆ ತಿರುಗಿ ಗೂಡ್‌ಶೆಡ್ ರಸ್ತೆಗೆ ಬಂದು ಮುಂದೆ ಸಾಗಬೇಕು.ಮೆಜೆಸ್ಟಿಕ್ ಕಡೆಯಿಂದ ಹುಣಸೇಮರ ವೃತ್ತದ ಕಡೆಗೆ ಹೋಗಬೇಕಾದ ವಾಹನಗಳು ವಾಟಾಳ್ ನಾಗರಾಜ್ ರಸ್ತೆಯಲ್ಲಿ ಸಾಗಿ ರಾಜಾಜಿನಗರ ಪ್ರವೇಶ ದ್ವಾರದ ಮೂಲಕ ಡಾ.ರಾಜ್‌ಕುಮಾರ್ ರಸ್ತೆಗೆ ಬಂದು ಮುಂದೆ ಚಲಿಸಬೇಕು.ಪ್ರಸನ್ನ ಚಿತ್ರಮಂದಿರ ವೃತ್ತದಿಂದ ಮಾಗಡಿ ಮುಖ್ಯರಸ್ತೆ ಮಾರ್ಗವಾಗಿ ಹುಣಸೇಮರ ವೃತ್ತದ ಕಡೆಗೆ ಹೋಗಬೇಕಾದವರು ಪ್ರಸನ್ನ ಚಿತ್ರಮಂದಿರ ವೃತ್ತದಲ್ಲಿ ಎಡಕ್ಕೆ ತಿರುಗಿ ಬಸವ ಮಂಟಪ, ರಾಜಾಜಿನಗರ ಪ್ರವೇಶ ದ್ವಾರದ ಮೂಲಕ ವಾಟಾಳ್ ನಾಗರಾಜ್ ರಸ್ತೆಗೆ ಬರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.