ಸೋಮವಾರ, ಮೇ 17, 2021
22 °C

ಜಾತ್ರಾ ಮಹೋತ್ಸವಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪೇಟೆ: ಪಟ್ಟಣದ ಗ್ರಾಮದೇವತೆ ದೊಡ್ಡಕೇರಮ್ಮನ ರಥೋತ್ಸವ ಜೂನ್ 22ರಂದು ನಡೆಯಲಿದ್ದು, ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ಬುಧವಾರ ಚಾಲನೆ ನೀಡಲಾಯಿತು.ಅಭ್ಯಂಜನ, ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ತಾಲ್ಲೂಕಿನ ಜೀವನದಿ ಹೇಮಾವತಿಯಿಂದ ಅಮ್ಮನವರ ಉತ್ಸವ ಮೂರ್ತಿಯನ್ನು ಬುಧವಾರ ಮೆರವಣಿಗೆ ಮಾಡಲಾಯಿತು.ಜೂನ್ 20ರಂದು ಸಿಡಿಮರವನ್ನು ತಂದು ಸಿಡಿ ಸ್ಥಾಪನೆ ಮಾಡಲಾಗುವುದು. ಜೂನ್ 21ರಂದು ವಿಶೇಷ ಪೂಜೆ ಮತ್ತು ಜೂನ್ 22ರಂದು ಮಧ್ಯಾಹ್ನ 3ಕ್ಕೆ ರಥೋತ್ಸವ ನಡೆಯಲಿವೆ.  ಜೂನ್ 23ರಂದು ಪಟ್ಟಣದ ದೊಡ್ಡಕೆರೆಯ ಅಂಗಳದಲ್ಲಿರುವ ದೊಡ್ಡಕೇರಮ್ಮನ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದ ರೊಂದಿಗೆ ಜಾತ್ರಾ ಕಾರ್ಯಕ್ರಮ ಮುಕ್ತಾಯ ಗೊಳ್ಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.