ಬುಧವಾರ, ಜನವರಿ 29, 2020
24 °C

ಜಾತ್ರೆಗಳು ಸಂಸ್ಕೃತಿಯ ಪ್ರತೀಕ: ದಾಸೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಹಬ್ಬ ಹಾಗೂ ಜಾತ್ರೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಜನರ ನಡುವೆ ಬಾಂಧವ್ಯ ಹಾಗೂ ಸ್ನೇಹ ವೃದ್ಧಿಗೆ ಸಂಪರ್ಕ ಸೇತುವೆ ಯಾಗಿದೆ ಎಂದು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೆಸ್ತೂರು ದಾಸೇಗೌಡ ಅಭಿಪ್ರಾಯಪಟ್ಟರು.ಸಮೀಪದ ಚಿಕ್ಕಂಕನಹಳ್ಳಿ ನಂದಿ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಉಚಿತ ಅನ್ನಸಂತರ್ಪಣೆ ಕಾರ್ಯಕ್ರಮದ ಆಯೋಜಕರಾದ ವಿಶ್ವ ಒಕ್ಕಲಿಗರ ಜನ ಜಾಗೃತಿ ಸಂಘದ ಜಿಲ್ಲಾಧ್ಯಕ್ಷ ದಿಲೀಪ್‌ಕುಮಾರ್ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು. ಇತಿಹಾಸ ಪ್ರಸಿದ್ಧ ಚಿಕ್ಕಂಕನಹಳ್ಳಿ ಜಾತ್ರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಆಗಮಿಸಿದ 50ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಉಚಿತ ಅನ್ನಸಂತರ್ಪಣೆ ಏರ್ಪಡಿಸುವ ಮೂಲಕ ಇತಿಹಾಸ ನಿರ್ಮಿಸಿರುವ ದಿಲೀಪ್‌ಕುಮಾರ್‌ರ ಅನ್ನ ದಾಸೋಹ ನಿರಂತರವಾಗಲಿ ಎಂದು ಆಶಿಸಿದರು.ವಿಶ್ವ ಒಕ್ಕಲಿಗರ ಜನಜಾಗೃತಿ ಸಂಘದ ರಾಜ್ಯಾಧ್ಯಕ್ಷ ಕೆ.ಎಂ. ರಾಮ ಕೃಷ್ಣ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಆರ್.ವಿ. ಸೋಮಣ್ಣ, ತಾಲ್ಲೂಕು ಅಧ್ಯಕ್ಷ ಯರಗನಹಳ್ಳಿ ಮಹಾಲಿಂಗು, ಮುಖಂಡರಾದ ಅಂಕನಾಥಪುರ ಶಂಕರ್, ರಾಮಣ್ಣ, ಶ್ರೀನಿವಾಸ್, ಪುರುಷೋತ್ತಮ್, ಕೋಡಿಬಾಳು ರಾಜಣ್ಣ, ಸಿದ್ದರಾಜು, ಕೆ.ಚಂದ್ರಶೇಖರ್, ರವಿ, ರಾಜು, ಪುಟ್ಟರಾಮು, ಹೂತಗೆರೆ ದಿನೇಶ್, ಕೆ.ಟಿ. ರಾಮಣ್ಣ, ಮಾಚಹಳ್ಳಿ ಕುಮಾರ್ ಇತರರು ಇದ್ದರು.

ಪ್ರತಿಕ್ರಿಯಿಸಿ (+)