ಬುಧವಾರ, ಆಗಸ್ಟ್ 21, 2019
28 °C

ಜಾತ್ರೆಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

Published:
Updated:

ನರಗುಂದ:  ಮಳೆಗಾಲ ಆರಂಭವಾಗಿ ಅರ್ಧ ಅವಧಿ ಸಮೀಪಿಸುತ್ತಿದ್ದರೂ ಪಟ್ಟಣ  ಹಾಗೂ ತಾಲ್ಲೂಕಿನಲ್ಲಿ ಮಳೆ ಬೀಳುತ್ತಿಲ್ಲ. ಇದರಿಂದ ಈ ಭಾಗದ ರೈತ ಸಮುದಾಯ ಆತಂಕಕ್ಕೆ ಒಳಗಾಗಿದೆ.ಪಟ್ಟಣದ ದಂಡಾಪುರದ ಹಗೇದ ಕಟ್ಟಿ ಓಣಿಯಲ್ಲಿ ನಡೆದ ಬಸವಣ್ಣದೇವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಅಹೋರಾತ್ರಿ ಭಜನೆ, ಅನ್ನ ಸಂತರ್ಪಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕರವೇ ಮುಖಂಡರಾಘವೇಂದ್ರ  ಗುಜಮಾಗಡಿ, ಬಸಯ್ಯ ಹಾರೋಗೇರಿಮಠ, ಡಾ. ಸುಭಾಸ ಮುಗಳಿ, ಬಸವರಾಜ ನೆಗಳೂರು, ಪ್ರಸಾದ ಗುಜಮಾಗಡಿ, ಬಸಪ್ಪ ಹೆಬ್ಬಾಳ, ಆರ್.ಎಂ.ಹೊಸೂರು, ಶೇಖಪ್ಪ ಹಕಾರಿ, ಸಿದ್ದಪ್ಪ ಆಯಟ್ಟಿ, ಹನಮಂತ ಕಾಟೇಕಾರ, ಅನೀಲ ಹಕಾರಿ ಇತರರು ಹಾಜರಿದ್ದರು.

Post Comments (+)