ಶನಿವಾರ, ಫೆಬ್ರವರಿ 27, 2021
31 °C
ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿರುವ ಗೃಹೋಪಯೋಗಿ ವಸ್ತುಗಳು; ದೇಸಿ ಉತ್ಪನ್ನಗಳಿಗೆ ಸಿಕ್ಕಿದೆ ವೇದಿಕೆ

ಜಾತ್ರೆ ಮುಗಿಯಿತು, ಹಸ್ತಕಲಾ ಬಂತು..

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ಜಾತ್ರೆ ಮುಗಿಯಿತು, ಹಸ್ತಕಲಾ ಬಂತು..

ಗದಗ:  ದೆಹಲಿ ಫ್ಯಾನ್ಸಿ ಚಪ್ಪಲಿ, ಒಡಿಸ್ಸಾ ಪಟೋಲಾ ಸೀರೆ, ಹರಿಯಾಣದ ಬೆಡ್ ಕವರ್‌, ಮುಂಬೈ ಟ್ರೆಂಡಿ ಬ್ಯಾಗ್‌, ಗುಜರಾತ್‌ನ ಕಸೂತಿ ಟಾಪ್‌ಗಳು..

ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಆರಂಭವಾಗಿರುವ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ‘ಹಸ್ತಕಲಾ’ದಲ್ಲಿ  ಸುತ್ತು ಹಾಕಿದರೆ ತರಹೇವಾರಿ ವಸ್ತುಗಳು ದೊರೆಯಲಿದೆ. ತೋಂಟದಾರ್ಯ ಮಠದ ಜಾತ್ರೆಯಲ್ಲಿ ತಿಂಗಳುಗಟ್ಟಲೇ ವಿವಿಧ ವಸ್ತು ಖರೀದಿಸಿದ್ದ ಗ್ರಾಹಕರಿಗೆ ಮತ್ತೆ ಜಾತ್ರೆ ಮೆರಗು ನೀಡಲು ಕೇರಳ ಮೂಲದ  ‘ಹಸ್ತಕಲಾ’ ಬಂದಿದೆ. ಮಕ್ಕಳು, ಮಹಿಳೆಯರು, ಯುವಕರು ಹಾಗೂ ಹಿರಿಯರ ವಿವಿಧ ಮಾದರಿ ವಸ್ತ್ರಗಳು, ವಸ್ತುಗಳು ಕಡಿಮೆ ದರದಲ್ಲಿ ದೊರೆಯುತ್ತವೆ. 

ವಸ್ತು ಪ್ರದರ್ಶನದಲ್ಲಿ ಸುಮಾರು 70 ಮಳಿಗೆಗಳನ್ನು ತೆರೆಯಲಾಗಿದ್ದು, ಹೊರ ರಾಜ್ಯ ಅಲ್ಲದೇ ರಾಜ್ಯದ ವಿವಿಧ ಸಂಘ ಸಂಸ್ಥೆ ತಯಾರಿಸಿದ ಉತ್ಪನ್ನಗಳಿಗೂ ಆದ್ಯತೆ ನೀಡಲಾಗಿದೆ.ಕೊಲ್ಕತ್ತಾದ ಗೋಣಿ ಚೀಲಗಳು, ಬಿಹಾರ ಬಾಗಲಪುರಿ ಚಾದರ, ರಾಜಸ್ಥಾನ ಸ್ಕರ್ಟ್ ಮತ್ತು ಟಾಪ್‌ಗಳು, ರಾಜ್ಯದ ಆಯುರ್ವೇದ ಉತ್ಪನ್ನಗಳು, ಪಶ್ಚಿಮ ಬಂಗಾಳ ಶಾಂತಿನಿಕೇತ ಚೀಲಗಳು, ಆಂದ್ರದ ಡ್ರೆಸ್ ಮೆಟೀರಿಯಲ್‌ಗಳು, ಮಧ್ಯಪ್ರದೇಶ ಕಾಟನ್ ಸೀರೆಗಳು ಪ್ರಮುಖ ಆಕರ್ಷಣೆ ಆಗಿವೆ.

ಅಲ್ಲದೇ ವಿವಿಧ ಮಾದರಿಯ ಚಪ್ಪಲಿಗಳು, ಲೇದರ್ ಬ್ಯಾಗ್, ನೈಟ್‌ ಡ್ರೆಸ್‌,    ಹೆಸರಾಂತ ಕಂಪೆನಿಗಳ ಶರ್ಟ್‌ ಮತ್ತು ಪ್ಯಾಂಟ್‌ಗಳು, ಕರ್ಟನ್‌ಗಳು, ಟಿ.ವಿ., ಫ್ರಿಡ್ಜ್‌ ಕವರ್‌ಗಳು, ಚಿಕ್ಕಮಕ್ಕಳ ಡ್ರೆಸ್‌ಗಳು, ಹೆಣ್ಮಕ್ಕಳ ಅಚ್ಚು ಮೆಚ್ಚಿನ ಬಣ್ಣಬಣ್ಣದ ಜೈಪುರಿ ಬಳೆಗಳು, ಕನ್ನಡಕ, ಲೆದರ್ ಬೆಲ್ಟ್‌, ಪರ್ಸ್‌ಗಳು, ಎಲೆಕ್ಟ್ರಾನಿಕ್ಸ್‌ ವಸ್ತುಗಳು ಮತ್ತು ತರಕಾರಿ ಕತ್ತರಿಸುವ ಸಾಧನಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯ ಇದೆ.ಇನ್ನೂ ಸೋಫಾ ಸೆಟ್, ದಿವಾನ್‌ ಕಾಟ್, ಕುಷನ್ ವಸ್ತುಗಳು ರಿಯಾಯತಿ ದರದಲ್ಲಿ ಸಿಗುತ್ತವೆ. ದೇಹದ ತೂಕ ಇಳಿಸುವ ಯಂತ್ರಗಳು, ಬಾಯಲ್ಲಿ ನೀರು ತರಿಸುವ ಉಪ್ಪಿನಕಾಯಿ, ಸಿಹಿ ಮಿಠಾಯಿ ಸೇರಿದಂತೆ ಗೃಹಿಣಿಯರಿಗೆ ಬೇಕಾದ ಗೃಹಪಯೋಗಿ ವಸ್ತುಗಳು ಒಂದೇ ಜಾಗದಲ್ಲಿ ದೊರೆಯಲಿದೆ. ಮೇಳದಲ್ಲಿ ವಸ್ತು ಖರೀದಿಸಿ ಬಳಿಕ ಹಸಿವಾಗಿದ್ದರೆ ಪಾನಿಪುರಿ, ಗೋಬಿ ಮಂಚೂರಿ ಸೇರಿದಂತೆ ವಿವಿಧ ತಿನಿಸುಗಳು ರುಚಿ ಸವಿಯಬಹುದು.  ಪ್ರವೇಶ ಮತ್ತು ಪಾರ್ಕಿಂಗ್ ಉಚಿತ.  ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 9.30 ರವರೆಗೆ ಪ್ರದರ್ಶನ ಮತ್ತು ಮಾರಾಟ. ‘ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ವ್ಯಾಪಾರ ಆಗುವ ನಿರೀಕ್ಷೆ ಇದೆ.  ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ವಸ್ತು ಖರೀದಿಸುತ್ತಿರುವುದರಿಂದ ಪ್ರದರ್ಶನವನ್ನು ಕೆಲ ದಿನ ವಿಸ್ತರಿಸುವ ಸಾಧ್ಯತೆ ಇದೆ’ ಎಂದರು ಮೇಳದ ಮಾಲೀಕ ಬಾಹುಬಲಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.