ಮಂಗಳವಾರ, ಜನವರಿ 21, 2020
29 °C

ಜಾನಪದ ಕಲಾ ಪ್ರದರ್ಶನ, ವಿಚಾರ ಸಂಕಿರಣ 8ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಕೇಶ್ವರ: ಮುಂದಿನ ಪೀಳಿಗೆಗೆ ಜಾನಪದ ಕಲೆ, ಸಾಹಿತ್ಯ, ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ತಿಳಿಸಿ ಕೊಡುವ ಉದ್ದೇಶದಿಂದ ಸಂಕೇಶ್ವರದ ನಿಡಸೋಸಿ ರಸ್ತೆಯಲ್ಲಿನ ಛತ್ರಪತಿ ಶಿವಾಜಿ ಮರಾಠಾ ಸಮಾಜ ಸಾಂಸ್ಕೃತಿಕ ಭವನದಲ್ಲಿ ಇದೇ 8 ರಂದು ಮುಂಜಾನೆ 10ಕ್ಕೆ  ವಿಚಾರ ಸಂಕಿರಣ ಮತ್ತು ಜಾನಪದ ಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಮತ್ತು ಸಂಕೇಶ್ವರದ ಅಕ್ಕಮಹಾದೇವಿ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೋ.ರು. ಚನ್ನಬಸಪ್ಪ ವಿಚಾರ ಸಂಕಿರಣವನ್ನು ಉದ್ಘಾಟಿಸುವರು. ಕೃಷಿ ಸಚಿವ ಉಮೇಶ ಕತ್ತಿ  ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ವಿ.ಎಲ್. ಪಾಟೀಲ, ಜಾನಪದ ವಿದ್ವಾಂಸ ಡಾ.ಸಿ.ಕೆ. ನಾವಲಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ-ನಿರ್ದೇಶಕ ಬಿ.ಡಿ. ಹಿರೇಗೌಡರ, ಸಂಕೇಶ್ವರ ಪುರಸಭೆಯ ಅಧ್ಯಕ್ಷ ಅಮರ ನಲವಡೆ, ಹಾಗೂ ಜಾನಪದ ಕಲಾವಿದ ಗೋಪಾಲ ಚಿಪಣಿ ಆಗಮಿಸುವರು.ಡಾ.ಗುರುಪಾದ ಮರಿಗುದ್ದಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಥಮ ಗೋಷ್ಠಿಯಲ್ಲಿ `ಜಾನಪದ ಸಾಹಿತ್ಯಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ~ ಕುರಿತು ಪ್ರೊ.ಶ್ರೀಶೈಲ ಮಠಪತಿ, `ಜಾನಪದ ಕಲೆಗೆ ಬೆಳಗಾವಿ ಜಿಲ್ಲೆಯ ಕೊಡುಗೆ~ ಕುರಿತು ಎ.ಎ. ಸನದಿ ತಮ್ಮ ಪ್ರಬಂಧ ಮಂಡಿಸಲಿದ್ದಾರೆ.ನಂತರ ಪ್ರೊ.ಎಲ್.ವಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯುವ ದ್ವಿತೀಯ ಗೋಷ್ಠಿಯಲ್ಲಿ `ಬೆಳಗಾವಿ ಜಿಲ್ಲೆಯ ಜಾನಪದ ಸಂಪ್ರದಾಯಗಳು~ ಕುರಿತು ಡಾ.ಜಿ.ಕೆ. ಹೀರೆಮಠ, `ಬೆಳಗಾವಿ ಜಿಲ್ಲೆಯ ಜಾನಪದ ಸಂಸ್ಕೃತಿ~ ಕುರಿತು  ಪ್ರೊ.ವಿ.ಬಿ. ಚೌಗಲಾ ತಮ್ಮ ಪ್ರಬಂಧ ಮಂಡಿಸಲಿದ್ದಾರೆ.ಮಧ್ಯಾಹ್ನ ಜಾನಪದ ಕಲಾ ಪ್ರದರ್ಶನ ನಡೆಯಲಿದ್ದು ಇದನ್ನು ಸಹಕಾರಿ ಧುರೀಣ ಎಸ್.ಎಸ್. ಶಿರಕೋಳಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಹುಕ್ಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಟಿ. ಕುರಪಿ, ಸಹಕಾರಿ ಧುರೀಣ ರಾಜೇಂದ್ರ ಪಾಟೀಲ ಆಗಮಿಸುವರು. ವಿವಿಧ ಜಾನಪದ ಕಲಾತಂಡಗಳಿಂದ ಕರಡಿ ಮಜಲು, ಡೊಳ್ಳಿನ ಪದಗಳು, ಭಜನೆ, ಗೀ-ಗಿ ಪದಗಳು, ಲಾವಣಿ, ಸಂಬಾಳ ವಾದನ, ಸೋಬಾನ ಪದಗಳು, ಪುರವಂತಿಕೆ, ಜಾನಪದ ನೃತ್ಯ,  ಹಾಗೂ ಜಾನಪದ ಹಾಡುಗಳ ಕಾರ್ಯಕ್ರಮ ನಡೆಯಲಿದೆ.ಸಂಜೆ 5-30 ಕ್ಕೆ ಹಿರಿಯ ಸಾಹಿತಿ ಬಾಳೇಶ ಲಕ್ಷೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವು ನಡೆಯ ಲಿದ್ದು ಮುಖ್ಯ ಅತಿಥಿಗಳಾಗಿ ಡಾ.ಡಿ.ವಿ. ಪುರಾಣಿಕಮಠ ಆಗಮಿಸುವರು. ವಿದ್ಯಾರ್ಥಿಗಳು, ಸಾರ್ವಜನಿಕರು ಆಗಮಿಸಬೇಕೆಂದು ಸಮಾರಂಭದ ಸಂಘಟಕರು ಕೋರಿದ್ದಾರೆ.ಸಾಯಿ ಭಕ್ತರ ಸಭೆ ಇಂದು

ಬೆಳಗಾವಿ: ಟಿಳಕವಾಡಿ ಶ್ರೀ ಸಾಯಿ ಮಂದಿರದ ಭಕ್ತರ ಸಭೆಯನ್ನು ಜ.5 ರಂದು ಮಧ್ಯಾಹ್ನ 12.30ಕ್ಕೆ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದೆ.ಭಕ್ತರು ಸಭೆಯಲ್ಲಿ ಭಾಗವಹಿಸಿ ದೇವಾಲಯದ ಅಭಿವೃದ್ಧಿ ಕುರಿತು ಸೂಕ್ತ ಸಲಹೆ ಸೂಚನೆ ನೀಡುವಂತೆ ದೇವಾಲಯದ ಆಡಳಿತಾಧಿಕಾರಿ ಹಾಗೂ ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ಜೆ.ಆರ್. ರೂಗಿ ಮನವಿ ಮಾಡಿದ್ದಾರೆ.ಆಡಳಿತಾಧಿಕಾರಿಗಳು ದೇವಾಲಯದ 12 ಹುಂಡಿಗಳನ್ನು ಜ. 2ರಂದು ತೆರೆದು ಅದರಲ್ಲಿ ಸಿಕ್ಕ 1,22,923  ರೂಪಾಯಿಗಳನ್ನು ಬ್ಯಾಂಕ್ ಆಫ್ ಮಹಾರಾಷ್ಟ್ರ ದೇವಾಲಯದ ಉಳಿತಾಯ ಖಾತೆಗೆ ಜಮಾ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)