ಸೋಮವಾರ, ಜುಲೈ 26, 2021
26 °C

ಜಾನಪದ ಕಲೆಗೆ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ‘ಇಂದಿನ ಜಾಗತೀಕರಣದ ಯುಗದಲ್ಲಿ ಆಧುನಿಕ ಜಂಜಾಟಗಳ ಮಧ್ಯೆ ಜಾನಪದ ಕಲೆ ಮಾಯವಾಗುತ್ತಿದ್ದು, ನಾವು ನಮ್ಮ ಮೂಲ ಸಂಸ್ಕೃತಿಯನ್ನು ಬಿಡುತ್ತಿದ್ದೇವೆ.  ಇದು ಅಪಾಯದ ಸಂಗತಿ’ ಎಂದು ಕರ್ನಾಟಕ ಜನಪದ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕೆ. ನಾಗರಾಜ ಹೇಳಿದರು.ಸೋಮವಾರ ಮುದ್ದಾಪುರ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಸಂರಕ್ಷಣಾ ಕಲಾ ಸಂಘ ಆಯೋಜಿಸಿದ್ದ “ವಿಜಾಪುರ ಮೂಲ ಜನಪದ ಕಲಾ ಉತ್ಸವ” ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು  ಮಾತನಾಡಿದರು.‘ಅಡ್ಡಾದಿಡ್ಡಿ ಹಾಡುವುದೆಲ್ಲಾ ಜಾನಪದ ಹಾಡು ಆಗುವುದಿಲ್ಲ.  ಇಂದು ಜಾನಪದದ ಹೆಸರಿನಲ್ಲಿ ಹೆಚ್ಚಾಗಿ ಬರುತ್ತಿರುವ ಅಶ್ಲೀಲ ಪದಗಳುಳ್ಳ ಹಾಡುಗಳು ಜಾನಪದ ಸಾಹಿತ್ಯಕ್ಕೆ  ಮಸಿ ಬಳಿಯುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ಡಮರು ಬಾರಿಸುವ ಮೂಲಕ ಉದ್ಘಾಟಿಸಿದ ಜಿ.ಪಂ. ಸದಸ್ಯ ಶಿವಾನಂದ ಅವಟಿ ಮಾತನಾಡಿ, ಜನಪದ ನಮ್ಮ ಮೂಲ ಕಲೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಾಗಿದೆ. ಸಂಸ್ಕೃತಿಯನ್ನು ಮರೆತರೆ ನಮ್ಮ ತಾಯಿಯನ್ನು ಮರೆತಂತೆ’ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಬಸವಂತ ಭಜಂತ್ರಿ, ಜನಪದ ಕಲಾವಿದರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.ಶ್ರೀ ಪ್ರಣವಾನಂದ ಸ್ವಾಮೀಜಿ ಹಾಗೂ ಡಾ. ವಿಶ್ವನಾಥ ಮಠ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಕೃತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಟಿ. ವೆಂಕಟೇಶ, ಹೊಸಕೋಟೆಯ ಸ್ಫೂರ್ತಿ ಮಹಿಳಾ ಸಂಸ್ಥೆಯ ಕಾರ್ಯದರ್ಶಿ ಶಿವಮ್ಮಾ, ರಾಜಪ್ಪ, ಸರಿತಾ, ಪುಷ್ಪ, ತಾ.ಪಂ. ಸದಸ್ಯ ನಾಗಪ್ಪ ಮೇಟಿ, ಮುತ್ತಣ್ಣ ಹುಗ್ಗಿ, ಗ್ರಾ.ಪಂ. ಅಧ್ಯಕ್ಷ ನಿಂಗಪ್ಪ ಕೇಸಾಪೂರ, ರಮೇಶ ಬಿರಾದಾರ, ಆನಂದಪ್ಪ ಬಂದಾಳ, ಬಿ.ಎನ್. ಮಠಪತಿ, ಜುಮ್ಮನಗೌಡ ಬಿರಾದಾರ, ಭೀಮನಗೌಡ ಪಾಟೀಲ, ಮಲ್ಲಪ್ಪ ಬಿರಾದಾರ ಮೊದಲಾದವರಿದ್ದರು.

ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಸಂರಕ್ಷಣಾ ಕಲಾ ಸಂಘದ ಅಧ್ಯಕ್ಷ ವೀರಭದ್ರಪ್ಪ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ಬಿರಾದಾರ (ದಳವಾಯಿ) ಸ್ವಾಗತಿಸಿದರು. ಆನಂದಕುಮಾರ ಹೂಗಾರ ನಿರೂಪಿಸಿ, ವಂದಿಸಿದರು.ಕಾರ್ಯಕ್ರಮಕ್ಕೂ ಮೊದಲು ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು. ಇದಕ್ಕೆ ನಿಂಗಪ್ಪ ಕೇಸಾಪೂರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಜಾನಪದ ಕಲಾ ತಂಡಗಳು ಮನರಂಜಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.