ಜಾನಪದ ಪ್ರಚುರಪಡಿಸಿದವರು ಜೀಶಂಪ:ಹಿರಿಯ ಸಾಹಿತಿ ಜವರೇಗೌಡ

7

ಜಾನಪದ ಪ್ರಚುರಪಡಿಸಿದವರು ಜೀಶಂಪ:ಹಿರಿಯ ಸಾಹಿತಿ ಜವರೇಗೌಡ

Published:
Updated:

ಬೆಂಗಳೂರು: `ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯ ಕನಸು ಕಂಡಿದ್ದ ಜೀ.ಶಂ. ಪರಮಶಿವಯ್ಯ ಅವರು ರಾಜ್ಯದ ಜಾನಪದ ಸಂಸ್ಕೃತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಿದ ಮಹಾನ್ ಚೇತನ~ ಎಂದು ಹಿರಿಯ ಸಾಹಿತಿ ದೇ.ಜವರೇಗೌಡ ಶ್ಲಾಘಿಸಿದರು.ಸಾಗರ್ ಪ್ರಕಾಶನವು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಜೀಶಂಪ ಜಾನಪದ ಮತ್ತು ಸೃಜನಶೀಲ ಸಾಹಿತ್ಯಮಾಲೆ~ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಜಾನಪದ ಸಂಸ್ಕೃತಿಗೆ ವೈಜ್ಞಾನಿಕ ಆಯಾಮ ತಂದುಕೊಟ್ಟವರಲ್ಲಿ ಜೀಶಂಪ ಅವರು ಮೊದಲಿಗರು. ಯಡಿಯೂರಪ್ಪ ಅವರ ಬಗ್ಗೆ ಎಷ್ಟೇ ಆರೋಪಗಳಿದ್ದರೂ ಜೀಶಂಪ ಅವರ ಜಾನಪದ ವಿ.ವಿ. ಸ್ಥಾಪನೆಯ ಕನಸನ್ನು ಈಡೇರಿಸಿದ್ದಾರೆ~ ಎಂದು ಹೇಳಿದರು.`ರಾಜಕಾರಣಿಗಳು, ಶಿಕ್ಷಕರು ಇಂಗ್ಲಿಷ್ ಭಾಷೆಯ ವಾರಸುದಾರರಂತೆ ವರ್ತಿಸುತ್ತಿದ್ದಾರೆ. ಇಂಗ್ಲಿಷ್ ಕಲಿಕೆ ಕಡ್ಡಾಯವಾಗುತ್ತಿರುವುದು ಒಂದು ರೀತಿಯ ಆತಂಕದ ವಿಚಾರ. ಈ ನಡುವೆ ಯುವ ಪೀಳಿಗೆಗೆ ಜಾನಪದ ಸಂಸ್ಕೃತಿಯ ಬಗ್ಗೆ ಅರಿವಿಲ್ಲದೇ ಇರುವುದು ಆತಂಕದ ವಿಚಾರ~ ಎಂದು ಹೇಳಿದರು.`ವಿಶ್ವದ ವಿವಿಧ ಭಾಗಗಳಲ್ಲಿರುವ ಜಾನಪದ ವಿ.ವಿಗಳೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ತುಲನಾತ್ಮಕ ಅಧ್ಯಯನ ನಡೆಸಬೇಕು. ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳನ್ನು ನಡೆಸಲು ವಿದ್ವಾಂಸರು ಮುಂದಾಗಬೇಕು~ ಎಂದು ಸಲಹೆ ನೀಡಿದರು.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ, `ಈ ಸಮಗ್ರ ಸಾಹಿತ್ಯ ಮಾಲೆಯೂ ಜಾನಪದ ವಿ.ವಿಯ ನಡೆಯಲಿರುವ ಉನ್ನತ ಅಧ್ಯಯನಕ್ಕೆ ಸಹಕಾರಿಯಾಗಲಿದೆ~ ಎಂದು ಹೇಳಿದರು.

ಕನ್ನಡ ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ,  ಶಾರದಾ ಜೀ.ಶಂ. ಪರಮಶಿವಯ್ಯ ಇತರರು ಉಪಸ್ಥಿತರಿದ್ದರು.`ಸೂಕ್ತ ನಿರ್ಧಾರ ಕೈಗೊಳ್ಳಿ~

`ಕಾವೇರಿ ನೀರು ಹಂಚಿಕೆ ವಿವಾದದ ವಿಚಾರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಎರಡು ರಾಜ್ಯಗಳಿಗೂ ಅನ್ಯಾಯವಾಗದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು~ ಎಂದು ಹಿರಿಯ ಸಾಹಿತಿ ದೇ.ಜವರೇಗೌಡ ಒತ್ತಾಯಿಸಿದರು.

`ನಾಡು- ನುಡಿಯ ವಿಚಾರದಲ್ಲಿ ರಾಜಕೀಯ ಪಕ್ಷಗಳು ರಾಜಕೀಯಕ್ಕೆ ಆಸ್ಪದ ನೀಡದೇ ನಾಗರಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೆಜ್ಜೆ ಇಡಬೇಕು. ಈ ನಿಟ್ಟಿನಲ್ಲಿ ಕಾವೇರಿ ನೀರಿನ ವಿವಾದ ಆದಷ್ಟು ಬೇಗ ಬಗೆಹರಿಯಲಿ~ ಎಂದು ಆಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry