ಜಾನಪದ ಬೀಜಸ್ವರೂಪದಲ್ಲಿ ಸಂರಕ್ಷಿಸುವುದು ಅಗತ್ಯ

7

ಜಾನಪದ ಬೀಜಸ್ವರೂಪದಲ್ಲಿ ಸಂರಕ್ಷಿಸುವುದು ಅಗತ್ಯ

Published:
Updated:

ಹಾವೇರಿ: ನಶಿಸುತ್ತಿರುವ ಭಾರತೀಯ ಸಂಸ್ಕೃತಿ ಪರಂಪರೆಯ ಅಸ್ತಿತ್ವ ಹುಡ ಕಲು ಹಾಗೂ ಸಂಸ್ಕೃತಿಯನ್ನು ಕಾಪಾ ಡಲು ಜಾನಪದವನ್ನು ಬೀಜಸ್ವರೂಪ ದಲ್ಲಿ ಸಂರಕ್ಷಿಸುವುದು ಅಗತ್ಯವಿದೆ~ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದರು.ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೋಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿವಿಗೆ ಗುರುವಾರ ಭೇಟಿ ನೀಡಿ ವಿವಿಯ ಕಾರ್ಯ ಚಟುವಟಿಕೆ ಗಳನ್ನು ಪರಿಶೀಲಿಸಿ  ಮಾತನಾಡಿದರು.ಜನಜೀವನದ ಮೂಲಜ್ಞಾನ ಮತ್ತು ಮಾನವೀಯ ಮೌಲ್ಯಗಳನ್ನು ಗುರುತಿಸುವ ಮೂಲಕ ಜಾನಪದ ಚಲನಶೀಲಗೊಳ್ಳಬೇಕು. ನೀರು ಕೇಳಿದರೆ ನೀರಿನ ಜತೆಗೆ ಬೆಲ್ಲ ನೀಡುವ ಭಾವ ಸಂಸ್ಕೃತಿ ನಮ್ಮದು. ಉದಾರತೆ ಮನೋಭಾವ ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿದ್ದು, ಆಧುನಿಕ ಕಾನೂನುಗಳು ಬಂದ ಮೇಲೆ ಎಲ್ಲ ವನ್ನು ಕಳೆದು ಕೊಂಡಿದ್ದೇವೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry