ಭಾನುವಾರ, ಏಪ್ರಿಲ್ 11, 2021
27 °C

ಜಾನಪದ ಸಂಭ್ರಮ 20ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾಂವ: ಕರ್ನಾಟಕ ಜಾನಪದ   ಅಕಾಡೆಮಿ, ಗಂಗಮ್ಮಾ ತಾಯಿ ಬೊಮ್ಮಾಯಿ ಟ್ರಸ್ಟ್ ಹಾಗೂ ತಾಲ್ಲೂಕು ವಿವಿಧ ಸಂಘ-ಸಂಸ್ಥೆಗಳು, ವಿವಿಧ ಜಾನಪದ ತಂಡಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದಲ್ಲಿ ಮಾ. 20ರಂದು ನಡೆಯುವ ಜಾನಪದ ಸಂಭ್ರಮದ ಪ್ರಯುಕ್ತ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಾನಪದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸುವಂತೆ ಸಭೆ ನಿರ್ಧರಿಸಿತು.ಅಂದು ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲ್ಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜಾನಪದ ಕಲಾವಿದರು, ಕವಿ-ಸಾಹಿತಿಗಳು, ಕಲಾಕಾರರು ಹಾಗೂ ಅನೇಕ ರಾಜಕಾರಣಿಗಳು ಈ ಬೃಹತ ಜಾನಪದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ಮೆರವಣಿಗೆಯಲ್ಲಿ ಅನೇಕ  ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಮೆರವಣಿಗೆ ಕಲಾವಿದರಿಗೆ ಹಾಗೂ ಜನತೆಗೆ ನೀರು, ಪಾನಕ, ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಹರ ಗ್ರಾಮಾಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ಕನ್ನಡದ ಧ್ವಜ ವಿತರಣೆ, ಹಳೇ ಬಸ್ ನಿಲ್ದಾಣದ ಹತ್ತಿರ ಪಾನಕದ ವಿತರಣೆ ನಡೆಯಲಿದೆ. ಟೆಂಪೊ ಮಾಲೀಕರು-   ಚಾಕರ ಸಂಘದಿಂದ ಹುಲಗೂರು ವೃತ್ತದ ಬಳಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.ಶರೀಫ ಶಿವಯೋಗಿಗಳ ಹೆಸರಿನಲ್ಲಿ ಸುಮಾರು 25 ಸಾವಿರ ಜನರು ಕಳಿತುಕೊಳ್ಳಬಹುದಾದ ಭವ್ಯ ವೇದಿಕೆಯನ್ನು ಸಿದ್ಧಗೊಳಿಸಲಾಗುತ್ತಿದೆ.ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ, ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ ಬ.ಫ.ಯಲಿಗಾರ, ತಹಸೀಲ್ದಾರ ಕೊಟ್ರೇಶ, ಜಿ.ಪಂ.  ಸದಸ್ಯರಾದ ಬಿ.ಟಿ.ಇನಾಮತಿ, ಸರೋಜಾ ಆಡಿನ, ಶಶಿಧರ ಹೊನ್ನಣ್ಣವರ, ಸಾಹಿತಿ ಶ್ರೀಶೈಲ ಹುದ್ದಾರ, ಕಸಾಪ ಶಂಕರಗೌಡ್ರ ಪಾಟೀಲ, ತಾ.ಪಂಅಧ್ಯಕ್ಷ ವೀರಣಗೌಡ್ರ ಪಾಟೀಲ, ತಾ.ಪಂ. ಉಪಾಧ್ಯಕ್ಷೆ ಶಾಂತಮ್ಮಾ ಬೊಮ್ಮನಹಳ್ಳಿ, ಪುರಸಭೆ ಅಧ್ಯಕ್ಷೆ ಇಂದ್ರಮ್ಮ ಹಾವೇರಿ, ಸಾಹಿತಿ ಡಾ. ರಾಮು ಮೂಲಗಿ, ಶಿವಾನಂದ ಮ್ಯಾಗೇರಿ, ರಾಜ್ಯ ಸಹಕಾರಿ ಧುರೀಣ ಸದಸ್ಯ ಎಚ್. ಆರ್. ದುಂಡಿಗೌಡ್ರ, ಜಯಣ್ಣ ಹೆಸರೂರ, ಟಿ.ವಿ.ಸುರಗಿಮಠ, ತಾ.ಪಂ.ಇಓ ಬಿ.ರೇವಣಪ್ಪ, ಬಿಇಓ ಡಾ.ಬಿ.ಕೆ.ಎಸ್.ವರ್ಧನ, ಪುರಸಭೆ ಸದಸ್ಯ ದಯಾನಂದ ಅಕ್ಕಿ, ಸುಭಾಸ ಚವ್ಹಾಣ, ಹರ ಗ್ರಾಮಾಭಿ ವೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ಮಂಜುನಾಥ ಮಣ್ಣಣ್ಣವರ      ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.