ಬುಧವಾರ, ಮೇ 12, 2021
24 °C

ಜಾನುವಾರುಗಳಿಲ್ಲದೇ ಭಣಗುಟ್ಟಿದ ಸಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೂರ: ಪ್ರತಿ ಮಂಗಳವಾರ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಗಿಜಿಗುಟ್ಟು ವಂತೆ ನಡೆಯುತ್ತಿದ್ದ ಪ್ರಸಿದ್ಧ ಜಾನುವಾರು ಸಂತೆ, ಬಸವ ಜಯಂತಿ ನಿಮಿತ್ತ ಸಾಕಷ್ಟು ಸಂಖ್ಯೆಯಲ್ಲಿ ಜಾನುವಾರುಗಳು ಬಾರದೇ ಮಾರ್ಕೆಟ್ ಆವರಣವು ಸಂಜೆವರೆಗೆ ಭಣಗುಟ್ಟುತ್ತಿದ್ದ ದೃಶ್ಯ ಕಂಡು ಬಂದಿತು.ಕೃಷಿಕನ ಸಂಗಾತಿ, ರೈತನ ಮಿತ್ರ ಎಂದೇ ಕರೆಸಿಕೊಳ್ಳುವ  ಬಸವಣ್ಣ (ಎತ್ತು) ನನ್ನು ಅದೂ ಬಸವ ಜಯಂತಿ ಯಂದು ಮಾರಾಟ ಮಾಡಲು ಯಾವ ರೈತರೂ ಮನಸ್ಸು ಮಾಡದೇ ಈ ದಿನ ಜಾನುವಾರು ವಹಿವಾಟಿನತ್ತಲೂ ಸುಳಿಯದ ಪರಿಣಾಮ ಜಾನುವಾರು ಸಂತೆ ಕಳಾಹೀನವಾಗಿತ್ತು.ವಹಿವಾಟಿಲ್ಲ: ಜಾನುವಾರು ಸಂತೆ ಸೂಕ್ತವಾಗಿ ಕೂಡದ ಪರಿಣಾಮ ಎಪಿಎಂಸಿ ಪ್ರಾಂಗಣದಲ್ಲಿ ಸಂತೆಯನ್ನೇ ನೆಚ್ಚಿ ವ್ಯಾಪಾರ ಮಾಡುವ ಹತ್ತಾರು ಹೋಟೆಲ್‌ಗಳು, ಪಾನ ಬೀಡಾ ಮತ್ತು ಹಗ್ಗ ಮತ್ತಿತರ ಅಂಗಡಿಗಳ ವರ್ತಕರು ಸಮರ್ಪಕ ವ್ಯಾಪಾರ ಇಲ್ಲದೇ ಬಿಸಿಲ ಬೇಗೆ, ಸೆಖೆಯ ಸಂಕಟದಲ್ಲಿ ಗೊಣ ಗುತ್ತಾ ಕುಳಿತಿದ್ದು ಸಾಮಾನ್ಯವಾಗಿತ್ತು.

 ಜಯಂತಿ ಅಂಗವಾಗಿ ಬಸವಣ್ಣಗಳನ್ನು ಅಲ್ಲಲ್ಲಿ ಸಡಗರದಿಂದ ಸಿಂಗರಿಸಿದ್ದು, ಕಂಡು ಬಂದಿತಲ್ಲದೇ ಪಟ್ಟಣದ ಕಿಲ್ಲಾ, ಹಳಪೇಟೆ ಹಾಗು ಹೊರವಲಯದಲ್ಲಿನ ಬಸವೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಿದವು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.