ಜಾನ್ ಡೇವಸ್ ಭಾರತ ತಂಡದ ನೂತನ ಬೌಲಿಂಗ್ ಕೋಚ್

7

ಜಾನ್ ಡೇವಸ್ ಭಾರತ ತಂಡದ ನೂತನ ಬೌಲಿಂಗ್ ಕೋಚ್

Published:
Updated:

ನವದೆಹಲಿ (ಪಿಟಿಐ): ಪ್ರಥಮ ದರ್ಜೆ ಕ್ರಿಕೆಟ್‌ನ ಮಾಜಿ ವೇಗದ ಬೌಲರ್ ಆಸ್ಟ್ರೇಲಿಯಾದ ಜಾನ್ ಡೇವಸ್ ಭಾರತ ತಂಡದ ನೂತನ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿ ಬಳಿಕ ಈಗಿರುವ ಬೌಲಿಂಗ್ ಕೋಚ್ ಎರಿಕ್ ಸಿಮನ್ಸ್ ಅವರ ಅವಧಿ ಮುಗಿಯಲಿದೆ. ಹಾಗಾಗಿ ಬಿಸಿಸಿಐ ಈ ನೇಮಕ ಮಾಡಿದೆ.`ಡೇವಸ್ ಅವರನ್ನು ಬೌಲಿಂಗ್ ಕೋಚ್ ಆಗಿ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ~ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಹೇಳಿದ್ದಾರೆ.41 ವರ್ಷ ವಯಸ್ಸಿನ ಡೇವಸ್ ಆಸ್ಟ್ರೇಲಿಯಾದ ದೇಶಿ ಕ್ರಿಕೆಟ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ತಂಡವನ್ನು ಪ್ರತಿನಿಧಿಸಿದ್ದರು. 76 ಪಂದ್ಯಗಳಿಂದ 25 ಸರಾಸರಿಯಲ್ಲಿ 285 ವಿಕೆಟ್ ಕಬಳಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ಕ್ವೀನ್ಸ್‌ಲ್ಯಾಂಡ್, ಸೌಥ್ ಆಸ್ಟ್ರೇಲಿಯಾ, ಅಡಿಲೇಡ್ ಸ್ಟ್ರೈಕರ್ಸ್ ತಂಡಗಳ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry