ಜಾಫ್ನಾ: ಇಂದು ಐತಿಹಾಸಿಕ ಮತದಾನ

7

ಜಾಫ್ನಾ: ಇಂದು ಐತಿಹಾಸಿಕ ಮತದಾನ

Published:
Updated:
ಜಾಫ್ನಾ: ಇಂದು ಐತಿಹಾಸಿಕ ಮತದಾನ

ಜಾಫ್ನಾ (ಐಎಎನ್‌ಎಸ್‌): ಶ್ರೀಲಂಕಾದ ತಮಿಳು ಭಾಷಿಕರ ಸಾಂಸ್ಕೃತಿಕ ಮತ್ತು ರಾಜಕೀಯ ರಾಜಧಾನಿ ಜಾಫ್ನಾದಲ್ಲಿ 25 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ.ಕಾಲು ಶತಮಾನ ಎಲ್‌ಟಿಟಿಇ ಬಿಗಿ ಹಿಡಿತದಲ್ಲಿದ್ದ ಈ ಉತ್ತರ ಪ್ರಾಂತ್ಯದಲ್ಲಿ ಶನಿವಾರ ಮತದಾನ ನಡೆಯಲಿದೆ. 25 ವರ್ಷಗಳ ನಂತರ ಇಲ್ಲಿಯ ನಾಗರಿಕರು ತಮ್ಮದೇ ಆದ ಪ್ರಾಂತೀಯ ಸರ್ಕಾರ ಆಯ್ಕೆ ಮಾಡುವ ಅವಕಾಶ ಪಡೆದಿದ್ದಾರೆ.ಐತಿಹಾಸಿಕ ಚುನಾವಣೆಯಲ್ಲಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಪಕ್ಷ ಮತ್ತು ತಮಿಳು ರಾಷ್ಟ್ರೀಯ ಮೈತ್ರಿಕೂಟದ (ಟಿಎನ್‌ಎ) ಅಭ್ಯರ್ಥಿಗಳ  ನಡುವೆ ನೇರ ಹಾಗೂ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.ಒಂದು ವೇಳೆ ತಮಿಳು ಭಾಷಿಕರ ಟಿಎನ್‌ಎ ಅಧಿಕಾರಕ್ಕೆ ಬಂದಲ್ಲಿ ಸುಪ್ರೀಂ­ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸಿ.ವಿ. ವಿಘ್ನೇಶ್ವರನ್‌ ಅವರು ಜಾಫ್ನಾ ಪ್ರಾಂತ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನಲಾಗಿದೆ. ಚುನಾವಣೆಯ ವಿಶೇಷ ವೀಕ್ಷಕರಾಗಿ ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್‌.ಗೋಪಾಲ­ಸ್ವಾಮಿ ನೇತೃ­ತ್ವದ ಸಾರ್ಕ್ ದೇಶಗಳ ಪ್ರತಿನಿಧಿಗಳ ತಂಡ ಆಗಮಿಸಿದೆ.ಚುನಾವಣಾ ಪೂರ್ವ ಸಮೀಕ್ಷೆಗಳ  ಪ್ರಕಾರ ಜಾಫ್ನಾದಲ್ಲಿ ಟಿಎನ್‌ಎ ಸರ್ಕಾರ  ಅಸ್ತಿತ್ವಕ್ಕೆ ಬರಲಿದೆ ಎಂದು  ಶೇ 34 ಮತ್ತು ಆಡಳಿತಾರೂಢ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಶೇ 21.7 ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry