ಭಾನುವಾರ, ಡಿಸೆಂಬರ್ 15, 2019
21 °C

ಜಾಫ್ನಾ ಚುನಾವಣೆ: ತಮಿಳು ಒಕ್ಕೂಟಕ್ಕೆ ಭರ್ಜರಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಫ್ನಾ ಚುನಾವಣೆ: ತಮಿಳು ಒಕ್ಕೂಟಕ್ಕೆ ಭರ್ಜರಿ ಗೆಲುವು

ಕೊಲಂಬೊ (ಪಿಟಿಐ):  ಶ್ರೀಲಂಕಾದ ತಮಿಳು ಭಾಷಿಕರ ಸಾಂಸ್ಕೃತಿಕ ಮತ್ತು ರಾಜಕೀಯ ರಾಜಧಾನಿ ಜಾಫ್ನಾದಲ್ಲಿ ನಡೆದ ಐತಿಹಾಸಿಕ ಚುನಾವಣೆಯಲ್ಲಿ ಟಿಎನ್‌ಎ (ತಮಿಳು ನ್ಯಾಷನಲ್ ಒಕ್ಕೂಟ) ಭರ್ಜರಿ ಗೆಲುವು ದಾಖಲಿಸಿದೆ.ಅಧ್ಯಕ್ಷ ಮಹೀಂದ ರಾಜಪಕ್ಸೆ ನೇತೃತ್ವದ ಯುಪಿಎಫ್‌ಎ ಮೈತ್ರಿ ಕೂಟ ಭಾರೀ ಮುಖಭಂಗ ಅನುಭವಿಸಿದೆ. 38 ಸ್ಥಾನಗಳಲ್ಲಿ ಟಿಎನ್‌ಎ 30ರಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಯುಪಿಎಫ್‌ಎ ಕೇವಲ 7 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿತು. ಶ್ರೀಲಂಕಾ ಮುಸ್ಲಿಂ ಕಾಂಗ್ರೆಸ್ ಒಂದು ಸ್ಥಾನ ಪಡೆದು ಕೊಂಡಿದೆ.ಎಲ್‌ಟಿಟಿಇ ಹಿಡಿತದಲ್ಲಿದ್ದ ಈ ಪ್ರದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಯುಪಿಎಫ್‌ಎ ಭಾರೀ ಪ್ರಯತ್ನ ನಡೆಸಿತ್ತು. ಆದರೆ ತಮಿಳು ನ್ಯಾಷನಲ್ ಒಕ್ಕೂಟವು 30 ಸ್ಥಾನಗಳನ್ನು ಗೆಲ್ಲುವ ಮೂಲಕ ಯುಪಿಎಫ್‌ಎ ಗೆ ಭಾರೀ ಆಘಾತವನ್ನುಂಟು ಮಾಡಿದೆ. ಮತ್ತೆ ಟಿಎನ್‌ಎ ಜಾಫ್ನಾದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.

ಪ್ರತಿಕ್ರಿಯಿಸಿ (+)