ಸೋಮವಾರ, ಜೂನ್ 21, 2021
29 °C

ಜಾಮಿಯಾ ಇಸ್ಲಾಮಿಯಾ ಸಂಸ್ಥೆಗೆ ಸುವರ್ಣ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಟ್ಕಳ: ಇಲ್ಲಿನ ಜಾಮಿಯಾ ಇಸ್ಲಾ ಮಿಯಾ ಶೈಕ್ಷಣಿಕ ಸಂಸ್ಥೆಗೆ 50 ವರ್ಷ ತುಂಬಿದ ಸವಿ ನೆನಪಿಗಾಗಿ ಭಾನುವಾರ ದಿಂದ ಹಮ್ಮಿಕೊಂಡಿರುವ ಶೈಕ್ಷಣಿಕ ಸಮ್ಮೇಳನದ ಅಂಗವಾಗಿ ಆಯೋಜಿಸಿ ರುವ, ನವಾಯತ್ ಜನಾಂಗದ ಸಂಸ್ಕೃತಿ ಬಿಂಬಿಸುವ ವಸ್ತುಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ.ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿ ಅಧ್ಯಕ್ಷ ಮೌಲಾನಾ ಸೈಯದ್ ಮಹ್ಮದ್ ರಾಬೆ ಹಸನಿ ನದ್ವಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಪ್ರದರ್ಶನಕ್ಕೆ ಚಾಲನೆ ನೀಡಿದರು.`ನವ ಆಯತ್~ಎಂದರೆ ಇತರೇ ಆಡುಭಾಷೆಯಲ್ಲಿ ಹೊಸದಾಗಿ ಬಂದವರು ಎಂದರ್ಥ.

 

ರಾಜ್ಯವಷ್ಟೆ ಅಲ್ಲ ಇಡೀ ದೇಶದ ಯಾವುದೇ ರಾಜ್ಯದಲ್ಲಿ ಕಂಡುಬರದ ನವಾಯತ್ ಮುಸ್ಲಿಮ್ ಜನಾಂಗ ಇರುವುದು ಭಟ್ಕಳದಲ್ಲಿ ಮಾತ್ರ. ಈ ನವಾಯತ್ ಜನಾಂಗ ದಿಂದಾಗಿಯೇ ಭಟ್ಕಳಕ್ಕೊಂದು ವಿಶಿಷ್ಟ ಸಾಹಿತ್ಯ, ಸಂಸ್ಕೃತಿ ದೊರಕಿದೆ. ಇವರ ಆಡು ಭಾಷೆ ಸಹ ಉರ್ದುಮಿಶ್ರಿತ ನವಾಯಿತಿ ಭಾಷೆ. ಇದಕ್ಕೆ ಲಿಪಿಯಿಲ್ಲ.ಇತ್ತೀಚಿನ ದಿನಗಳಲ್ಲಿ ವಿಶಿಷ್ಟ ಸಂಸ್ಕೃತಿ ಯನ್ನು ಹೊಂದಿರುವ ನವಾಯಿತಿ ಭಾಷೆಗೆ ಅಕಾಡೆಮಿ ಸ್ಥಾಪಿಸಬೇಕೆಂಬ ಬೇಡಿಕೆ ಹೆಚ್ಚುತ್ತಿದೆ. ಭಟ್ಕಳದಲ್ಲಿ ವಿಶೇಷ ವಾಗಿರುವ ನವಾಯತ್ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುವ ವಸ್ತು ಪ್ರದರ್ಶನ ಮತ್ತು ಭಿತ್ತಿಚಿತ್ರವನ್ನು ಜಾಮಿಯಾ ಇಸ್ಲಾಮಿಯಾದ ಶೈಕ್ಷಣಿಕ ಸಮ್ಮೇಳನದಲ್ಲಿ ಏರ್ಪಡಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

ಈ ವಸ್ತು ಪ್ರದರ್ಶನದಲ್ಲಿ,ಈ ಹಿಂದೆ ನವಾ ಯತ್ ಜನಾಂಗದವರು ಮನೆಗಳಲ್ಲಿ ಬಳಸುತ್ತಿದ್ದ ಗೃಹಬಳಕೆಯ ವಸ್ತುಗಳು, ಮನೆಯ ಹೊರ ಹಾಗೂ ಒಳನೋಟ, ಮನೆಯೊಳಗೆ ಅಲಂಕರಿಸುವ ಸರಂಜಾ ಮುಗಳು, ಅವರ ಆಚಾರ, ವಿಚಾರ ಗಳನ್ನು ಪ್ರಚುರಪಡಿಸುವ ಭಿತ್ತಿಚಿತ್ರಗಳು, ಉಡುಗೆ ತೊಡುಗೆಗಳು ಸೇರಿದಂತೆ ನವಾಯತ್ ಸಂಸ್ಕೃತಿಯ ಸಂಪೂರ್ಣ ವಿವರದ ಮಾಹಿತಿ ಈ ವಸ್ತುಪ್ರದರ್ಶನದಲ್ಲಿದೆ.ಜತೆಗೆ ನವಾಯತ್ ಸಮುದಾಯಕ್ಕೆ ಸೇರಿದ ಹಳೆಯ ಕಾಲದ ಮನೆ ಯೊಂದನ್ನೇ ಪ್ರದರ್ಶನಕ್ಕಿಟ್ಟಿರು ವುದು ಎಲ್ಲರ ಗಮನ ಸೆಳೆಯುತ್ತಿದೆ.ವಸ್ತು ಪ್ರದರ್ಶನದಲ್ಲಿ, ಜಮಿಯಾ ಇಸ್ಲಾಮಿಯಾ ಸಂಸ್ಥೆ ನಡೆದು ಬಂದ ದಾರಿ, ಅದರ ಬೆಳವಣಿಗೆ, ಇದರ ಅಂಗಸಂಸ್ಥೆಗಳ ವಿವರ, ಭಟ್ಕಳದಾದ್ಯಂತ ಇರುವ ಮಸೀದಿ ಹಾಗೂ ಶಿಕ್ಷಣ ಸಂಸ್ಥೆಗಳ ಮಾದರಿಗಳು, ತಾಲ್ಲೂಕಿನ ರಮಣೀಯ ತಾಣಗಳ ವಿವರದೊಂದಿಗೆ `ಪರಮ ದಯಾಮಯನೂ, ಕರುಣಾ ನಿಧಿಯೂ ಆದ ಅಲ್ಲಾಹನ ಸಂದೇಶ ವನ್ನು ಸಾರುವ ನುಡಿಮುತ್ತುಗಳ ವರ್ಣನೆ, ಕುರಾನ್‌ನ ಹಲವು ಅಧ್ಯಾಯ ಗಳಲ್ಲಿರುವ ಪ್ರಮುಖ ವಿಷಯಗಳ ಬಗ್ಗೆಯೂ ಬರಹದ ರೂಪದಲ್ಲಿ ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಲಾಗು ತ್ತಿದೆ.

 

ಇದನ್ನು ನೋಡಲು ಹಿಂದೂ ಮುಸ್ಲಿಮರೆನ್ನದೇ ತಂಡೋಪತಂಡ ವಾಗಿ ಜನರು ಬರುತ್ತಿದ್ದಾರೆ.

ಸಾವಿರಾರು ಜನರಿಗೆ ಮಾಂಸಾಹಾರ ಮತ್ತು ಸಸ್ಯಹಾರದ ಅಚ್ಚುಕಟ್ಟಾದ ಊಟದ ವ್ಯವಸ್ಥೆ, ಬಂದವರಿಗೆಲ್ಲಾ ತಂಪು ಪಾನೀಯವನ್ನು ಕರೆದುಕೊಡುವ ದೃಶ್ಯ, ಜಾಮಿಯಾ ಇಸ್ಲಾಮಿಯಾದ ತುಂಬೆಲ್ಲಾ ಸಮವಸ್ತ್ರದಿಂದ ಕಂಗೊಳಿ ಸುತ್ತ ಬಂದವರೆಲ್ಲರನ್ನೂ ನಗುಮುಖ ದಿಂದ ಸ್ವಾಗತಿಸುವ, ಅವರು ಕೇಳಿದ ಮಾಹಿತಿಯನ್ನು ನೀಡುತ್ತಿರುವ ಸ್ವಯಂ ಸೇವಕರಿಂದಾಗಿ ಇಡೀ ಜಾಮಿಯಾ ಇಸ್ಲಾಮಿಯಾದ~ಸುಮಾರು 22 ಎಕರೆಯ ಕ್ಯಾಂಪಸ್ ಕಂಗೊಳಿಸುತ್ತಿದೆ.

 

ವರ್ಷಾಚರಣೆ

ಶಿರಸಿ: ಇಲ್ಲಿನ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನ ಸುವರ್ಣ ಮಹೋ ತ್ಸವ ವರ್ಷಾಚರಣೆ ಭಾಗವಾಗಿ  ಇದೇ 21ರ ಬೆಳಿಗ್ಗೆ 11 ಗಂಟೆಗೆ ಡಾ. ಸುಮಿತ್ರಾ ಹಲವಾಯಿ ಬರೆದ ~ತತ್ವ ಮಸಿ~ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.  ಡಾ. ಎಂ.ಜಿ. ಹೆಗಡೆ ಅಧ್ಯಕ್ಷತೆ ವಹಿಸುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.