ಶುಕ್ರವಾರ, ಮೇ 14, 2021
21 °C

ಜಾಮೀನು ಕೋರಿಕೆ: ಅಮರ್ ಸಿಂಗ್ ಮಧ್ಯಂತರ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಓಟಿಗಾಗಿ ನೋಟು ಹಗರಣದಲ್ಲಿ ಬಂಧನಕ್ಕೆ ಒಳಗಾದ ರಾಜ್ಯಸಭಾ ಸದಸ್ಯ  ಅಮರ್ ಸಿಂಗ್ ಅವರು, ಬಂಧಿತರಾದ ಸ್ವಲ್ಪ ಸಮಯದ ಬಳಿಕ ಆರೋಗ್ಯದ ಆಧಾರದಲ್ಲಿ ಜಾಮೀನು ನೀಡುವಂತೆ ಕೋರಿ ಹೊಸದಾಗಿ ನಗರದ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.  ಈ ಅರ್ಜಿಗೆ ಸೆಪ್ಟೆಂಬರ್ 8ರಂದು ಉತ್ತರ ನೀಡುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.ವಿಶೇಷ ನ್ಯಾಯಾಧೀಶರಾದ ಸಂಗೀತಾ ಧೀಂಗ್ರಾ ಸೆಹಗಲ್ ಅವರ ಮುಂದೆ ಸ್ವತಃ ವಾದ ಮಂಡಿಸಿದ ಅಮರ್ ಸಿಂಗ್, ತಾವು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿ, ಜಾಮೀನು ನೀಡಿದರೆ ತಾನು ಪರಾರಿಯಾಗುವುದಿಲ್ಲ ಅಥವಾ ಸಾಕ್ಷ್ಯದಲ್ಲಿ ಕೈಹಾಕುವ ಕೆಲಸ ಮಾಡುವುದಿಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದರು.~ನಾನು ನಿಜವಾಗಿಯೂ ಅಸ್ವಸ್ಥನಾಗಿದ್ದೇನೆ. ನನ್ನ ದೇಹಕ್ಕೆ ನಿಯಮಿತ ಡಯಾಲಿಸಿಸ್, ರಕ್ತ ಪರೀಕ್ಷ, ಔಷಧ ಸೇವನೆಯ ಅಗತ್ಯವಿದೆ. ಜಾಮೀನು ನೀಡಿದರೆ ನಾನು ಓಡಿ ಹೋಗುವುದಿಲ್ಲ ಮತ್ತು ಸಾಕ್ಷ್ಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ನಾನು ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.ಯಾರೇ ಸಾಕ್ಷಿದಾರರ ಮೇಲೂ ನಾನು ನನ್ನ ಪ್ರಭಾವ ಬೀರಿಲ್ಲ. ಕಾನೂನಿನ ಪ್ರಕಾರ ಆರೋಪ ಸಾಬೀತಾಗುವವರೆಗೂ ಯಾರೇ ವ್ಯಕ್ತಿ ಅಪರಾಧಿಯಾಗುವುದಿಲ್ಲ. ಅಲ್ಲಿಯವರೆಗೆ ಮೂತ್ರಪಿಂಡ ಕಸಿಗೆ ಒಳಗಾದ ವ್ಯಕ್ತಿಗೆ ಆರೋಗ್ಯ ಕುರಿತು ಇಂತಹ ಕಾಳಜಿಯ ಅಗತ್ಯ ಇದೆಯೇ ಎಂಬುದಾಗಿ ಯಾರನ್ನಾದರೂ ವಿಚಾರಿಸಿ ಎಂದು ಸಿಂಗ್ ಮನವಿ ಮಾಡಿದರು.ಸಿಂಗ್ ಅವರು ಮನವಿ ಮಾಡುಕೊಳ್ಳುತ್ತಿದ್ದಾಗ, ನ್ಯಾಯಾಧೀಶರು ~ಎಲ್ಲ ಆರೋಪಿಗಳನ್ನು ಸಮಾನವಾಗಿ ನೋಡಿಕೊಳ್ಳಲಾಗುವುದು~ ಎಂದು ಹೇಳಿದರು.ಆಗ ಸಮಾಜವಾದಿ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ, ~ನನ್ನ ಆರೋಗ್ಯದ ಕಾರಣ, ನನ್ನನ್ನು ಇತರ ಆರೋಪಿಗಳಿಗೆ ಸಮಾನವಾಗಿ ಇರಿಸಬಾರದು~ ಎಣದಯ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.