ಶುಕ್ರವಾರ, ಮೇ 7, 2021
26 °C

ಜಾಮೀನು ಬಯಸುವುದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್):  `ಸಂಪೂರ್ಣ ಆರೋಪಮುಕ್ತನಾಗಿ ಜೈಲಿನಿಂದ ಹೊರಬರಬೇಕೆಂಬುದೇ ನನ್ನ ಗುರಿ. ಹೀಗಾಗಿ ಜಾಮೀನು ಕೋರಿ ಯಾವುದೇ ಅರ್ಜಿ ಸಲ್ಲಿಸುವುದಿಲ್ಲ~ ಎಂದು 2 ಜಿ ತರಂಗಾಂತರ ಹಗರಣದ ಆರೋಪಿ ಎ.ರಾಜಾ ಪುನರುಚ್ಚರಿಸಿದ್ದಾರೆ.`ನಾನು ಮುಗ್ಧ. ಪ್ರಾಸಿಕ್ಯೂಷನ್ ಪರ ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸುವುದಕ್ಕಷ್ಟೇ ಗಮನ ಕೇಂದ್ರೀಕರಿಸುತ್ತೇನೆ~ ಎಂದು ರಾಜಾ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 410 ಅರ್ಜಿಗಳು ಸಲ್ಲಿಕೆಯಾಗಿದ್ದು, ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳೂ ಹಲವಾರು ಇವೆ. ಆದರೆ 14 ತಿಂಗಳುಗಳಿಂದ ಕಾರಾಗೃಹದಲ್ಲಿರುವ ರಾಜಾ ಮಾತ್ರ ಅರ್ಜಿಹಾಕುವ ಗೊಡವೆಗೆ ಹೋಗಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.