ಜಾಯ್ ಆಫ್ ಗಿವಿಂಗ್

7

ಜಾಯ್ ಆಫ್ ಗಿವಿಂಗ್

Published:
Updated:
ಜಾಯ್ ಆಫ್ ಗಿವಿಂಗ್

`ಜಾಯ್ ಆಫ್ ಗಿವಿಂಗ್~ ಭಾರತದ ಪ್ರಮುಖ ದಾನ ಆಂದೋಲನ. ಇಲ್ಲದವರಿಗೆ ನಮ್ಮಿಂದ ಏನಾದರೂ, ಯಾವುದೇ ರೂಪದಲ್ಲಾದರೂ (ಹಣ, ಸಮಯ, ಕೌಶಲ್ಯ ಇತ್ಯಾದಿ) ಸಹಾಯ ಮಾಡಬೇಕು ಎನ್ನುವ ಮನೋಭಾವ ಬೆಳೆಸಲು, ದಾನಿಗಳಿಗೊಂದು ವೇದಿಕೆ ಕಲ್ಪಿಸಲು ಈ ಆಂದೋಲನ ನಡೆಯುತ್ತದೆ.ಇದಕ್ಕಾಗಿ ಎಂ ಜಿ ರಸ್ತೆಯಲ್ಲಿನ ತಾಜ್ `ತಾಜ್ ವಿವಂತ~ ಹಲವು ಕಾರ್ಯಕ್ರಮ ಆಯೋಜಿದೆ. ಈ ಪೈಕಿ `ಶ್ಯಾಡೋ ಎ ಷೆಫ್~ನಲ್ಲಿ ಮಾಸ್ಟರ್ ಷೆಫ್ ಸೆಲ್ವರಾಜು ಅವರು ಪಾಕಶಾಸ್ತ್ರದ ಹಲವು ರಹಸ್ಯಗಳನ್ನು ಬಹಿರಂಗ ಮಾಡಲಿದ್ದಾರೆ, `ಫೈನ್ ಚಾಕೊಲೇಟ್ಸ್~ ತಯಾರಿಕೆ, ಇಟಾಲಿಯನ್ ಮಾದರಿಯಲ್ಲಿ ಪಾಸ್ತಾ ಮಾಡುವ ವಿಧಾನಗಳ ಟಿಪ್ಸ್‌ಗಳನ್ನು ಹಂಚಿಕೊಳ್ಳಲಿದ್ದಾರೆ.ಇದಕ್ಕಾಗಿ ನಡೆಯುವ ಹರಾಜಿನಲ್ಲಿ ಪ್ರತಿ ವಿಭಾಗದ ಟಾಪ್ 5 ಬಿಡ್ಡರ್‌ಗಳು ಅಕ್ಟೋಬರ್ 15ರಂದು ಸೆಲ್ವರಾಜು ಅವರೊಂದಿಗೆ ಸಮಯ ಕಳೆಯಲಿದ್ದಾರೆ.ಹರಾಜು ಪ್ರಕ್ರಿಯೆ ಇಂದಿನಿಂದ ಅಕ್ಟೋಬರ್ 8ರ ವರೆಗೆ www.ebay.in ವೆಬ್‌ಸೈಟಿನಲ್ಲಿ ನಡೆಯಲಿದೆ. ಇದರಿಂದ ಬರುವ ಎಲ್ಲ ಗಳಿಕೆಯನ್ನು ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳ ಏಳಿಗೆಗೆ ಶ್ರಮಿಸುತ್ತಿರುವ ಕರ್ನಾಟಕ ಸ್ಪಾಸ್ತಿಕ್ಸ್ ಸೊಸೈಟಿಗೆ ನೀಡಲಾಗುವುದು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry