ಜಾರಿಯಾಗದ ಯೋಜನೆ: ಅಭಿವೃದ್ಧಿ ಕುಂಠಿತ

7

ಜಾರಿಯಾಗದ ಯೋಜನೆ: ಅಭಿವೃದ್ಧಿ ಕುಂಠಿತ

Published:
Updated:
ಜಾರಿಯಾಗದ ಯೋಜನೆ: ಅಭಿವೃದ್ಧಿ ಕುಂಠಿತ

ಅಳ್ನಾವರ: ನಗರ ಹಾಗೂ ಪಟ್ಟಣಗಳ ಅಭಿವೃದ್ಧಿಗಾಗಿ ಕಳೆದ ಒಂದು ವರ್ಷದ ಹಿಂದೆ ಘೋಷಿಸಿದ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾಮ­ಗಾರಿಗಳ ‘ನಗರೋತ್ಥಾನ ಯೋಜನೆ’ ಅನುಷ್ಠಾನದ ವಿಳಂಬದಿಂದ ಸಾಕಷ್ಟು ಕಾಮಗಾರಿಗಳು ಆರಂಭ­ವಾಗದೆ  ಅಭಿವೃದ್ಧಿ ಕುಂಠಿತಗೊಂಡಿದೆ.ಮಲೆನಾಡಿನ ಸೆರಗಿನ ಈ ಪ್ರದೇಶ­ದಲ್ಲಿ ಈ ಬಾರಿ ಸಾಕಷ್ಟು ಮಳೆ ಬಿದ್ದು ಪಟ್ಟಣದ ಎಲ್ಲಾ ರಸ್ತೆಗಳು ಹಾಳಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ರಸ್ತೆ ಮಧ್ಯೆ ದೊಡ್ಡ ದೊಡ್ಡ ತೆಗ್ಗುಗಳು ಬಿದ್ದಿದ್ದು, ಜನರು ಪ್ರಯಾಸ ಮಾಡಿ ನಿಧಾನವಾಗಿ ಸಂಚರಿಸುವ ಅನಿ­ವಾರ್ಯತೆ ಉಂಟಾಗಿದೆ.ಚರಂಡಿ ಕೂಡಾ  ದುರಸ್ತಿ ಕಾಣದೆ ಅಲ್ಲಲ್ಲಿ ಕೊಳಚೆ ಸಂಗ್ರಹ­ಗೊಂಡು ದುರ್ವಾಸನೆ ಹರ­ಡಿದೆ.ಪಟ್ಟಣ ಹಾಗೂ ಶಹರ ಪ್ರದೇಶಗಳ ಮೂಲ ಸೌಕರ್ಯ ಕಲ್ಪಿಸುವ ಉದ್ದೇಶ­ದಿಂದ ರಸ್ತೆ ಹಾಗೂ ಚರಂಡಿ ದುರಸ್ತಿಗೆ ಹಿಂದಿನ ಸರಕಾರ ವಿಶೇಷ ಅನುದಾನದ ನಗರೋತ್ಥಾನ ಯೋಜನೆ ಜಾರಿಗೊಳಿ­ಸಿತ್ತು. ಅದರಂತೆ ಇಲ್ಲಿನ ಪಟ್ಟಣ ಪಂಚಾ­ಯಿತಿ ₨ 5 ಕೋಟಿ ಮೊತ್ತದ ಕ್ರಿಯಾ ಯೋಜನೆ ತಯಾರಿಸಿ ಸರಕಾರಕ್ಕೆ ಕಳುಹಿಸಿತ್ತು. ಈ ಪ್ರಸ್ತಾವ ಕಳುಹಿಸಿ ಸುಮಾರು ಒಂದು ವರ್ಷ ಗತಿಸುತ್ತಾ ಬಂದರೂ ಯೋಜನೆ ಮಾತ್ರ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.ಧಾರವಾಡ ಜಿಲ್ಲೆಯ ಎಲ್ಲಾ ಪಟ್ಟಣ ಪಂಚಾಯಿತಿಗಳು ಈ ಯೋಜನೆಗೆ ಕ್ರಿಯಾ ಯೋಜನೆ ಸಲ್ಲಿಸಿವೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಈ ಯೋಜನೆ ಜಾರಿಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ತ್ವರಿತ ಗತಿ ಹಿಡಿದಿವೆ. ಆದರೆ ಧಾರವಾಡ ಜಿಲ್ಲೆ­ಯಲ್ಲಿಯೇ ಈ ಯೋಜನೆಗೆ ತುಕ್ಕು ಹಿಡಿ­ದಿರುವುದು ಯಾಕೆ ಎಂಬ ಪ್ರಶ್ನೆ ಜನ­ರನ್ನು ಕಾಡತೊಡಗಿದೆ.ಈ ಯೋಜನೆಯಡಿ ಪಟ್ಟಣದ  ಎಲ್ಲ ರಸ್ತೆ ಮತ್ತು ಚರಂಡಿ ದುರಸ್ತಿ ಹಾಗೂ ನಿರ್ಮಾಣ ಕಾರ್ಯದ ಯೋಜನೆ ಇದೆ. ನಗರೋತ್ಥಾನ  ಯೋಜನೆಯಲ್ಲಿ ಸ್ಥಳೀಯ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯ ಸೇರಿಸಿದ್ದರಿಂದ ಬೇರೆ ಯೋಜನೆಯಲ್ಲಿ ಈ ಕಾಮಗಾರಿ ಕೈಗೊಳ್ಳಲು ಆಗದ ಅಸಹಾಯಕ ಸ್ಥಿತಿಯನ್ನು  ಸ್ಥಳೀಯ ಪಟ್ಟಣ ಪಂಚಾ­ಯಿತಿ ಎದುರಿಸುತ್ತಿದೆ. ಜಿಲ್ಲಾಡಳಿತ ಈ ಯೋಜನೆಯತ್ತ ಗಮನ ಹರಿಸಬೇಕು ಎಂಬುದು ಜನರ ಅಭಿಪ್ರಾಯವಾಗಿದೆ.ಇಲ್ಲಿನ ಪಟ್ಟಣ ಪಂಚಾಯಿತಿ ಸದಸ್ಯರು ಇನ್ನೂ ಅಧಿಕಾರ ಸ್ವೀಕರಿಸಿಲ್ಲ. ಆದ್ದ­ರಿಂದ ಅವರಿಗೂ ಜನರು ಒತ್ತಾಯ ಮಾಡಲು ಆಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂ­ರಾವ್‌ ಗುರುವಾರ ಧಾರವಾಡಕ್ಕೆ ಬರ­ಲಿದ್ದು, ಪಟ್ಟಣ ಪಂಚಾಯಿತಿ ಸದಸ್ಯರ ನಿಯೋಗ ಅವರಿಗೆ ಮನವಿ ಸಲ್ಲಿಸಲಿದೆ. ನೂತನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ  ಅಧಿಕಾರಿಗಳು ಈ ಯೋಜನೆ­ಯತ್ತ ಗಮನ ಹರಿಸಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವರೇ ಎಂಬುದನ್ನು ಕಾಯ್ದು ನೋಡಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry