ಭಾನುವಾರ, ಜೂನ್ 20, 2021
24 °C

ಜಾರ್ಖಂಡ್‌ ಬಂದ್‌: ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ (ಪಿಟಿಐ): ಜಾರ್ಖಂಡ್‌ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡ­ಬೇಕು ಎಂದು ಆಗ್ರಹಿಸಿ ಮೂರು ಪಕ್ಷ­ಗಳು ಕರೆ ನೀಡಿದ್ದ ಬಂದ್‌ನಿಂದಾಗಿ ಭಾನುವಾರ ಜನಜೀವನ ಅಸ್ತವ್ಯಸ್ತವಾಗಿತ್ತು.ಬಂದ್‌ನಿಂದಾಗಿ ರೈಲು­ಗಳು ಮತ್ತು ವಾಹನಗಳು ಕಾರ್ಯನಿ­ರ್ವ­ಹಿಸಲಿಲ್ಲ. ಬಂದ್‌ನಲ್ಲಿ ಭಾಗವಹಿಸಿದ್ದ ಜಾರ್ಖಂಡ್‌ ವಿಕಾಸ್‌ ಮೋರ್ಚಾ (ಪ್ರಜಾ­ತಾಂತ್ರಿಕ್‌) (ಜೆವಿಎಂ), ಆಜ್ಸು ಪಕ್ಷ ಮತ್ತು ಸಂಯುಕ್ತ ಜನತಾದಳ ನೂರಾರು ಕಾರ್ಯಕರ್ತರನ್ನು ರಾಜ್ಯದ ವಿವಿಧ ಪ್ರದೇಶದಲ್ಲಿ ಪ್ರತ್ಯೇಕವಾಗಿ ಬಂಧಿ­ಸ­ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗಿರಿಧ್‌ ಮತ್ತು ಪಶ್ಚಿಮ ಸಿಂಗ್‌­ಭೂಮ್‌ ಜಿಲ್ಲೆಗಳಲ್ಲಿ ರೈಲು ಸಂಚಾರ­ವನ್ನು ವಿವಿಧ ಪಕ್ಷಗಳ ಕಾರ್ಯಕರ್ತರು ತಡೆದರು.

ರಾಷ್ಟ್ರೀಯ ಹೆದ್ದಾರಿ ಮತ್ತು ಇತರೆ ರಾಜ್ಯ ಹೆದ್ದಾರಿ­ಗಳನ್ನು ಬಂದ್‌ ಮಾಡಿ ಪ್ರತಿಭಟಿಸು­ತ್ತಿದ್ದರಿಂದ ವಾಹನಗಳು ಮಾರ್ಗಮಧ್ಯ­ದಲ್ಲಿಯೇ ನಿಂತು ಸಂಚಾರ ದಟ್ಟಣೆ ನಿರ್ಮಾಣ­ವಾಯಿತು. ಅನೇಕ ಲಾರಿ­ಗಳು ರಸ್ತೆಗೆ ಇಳಿಯಲಿಲ್ಲ­ವಾದ್ದರಿಂದ ವ್ಯಾಪಾರ ವಹಿವಾಟಿಗೂ ಸಮಸ್ಯೆಯಾಯಿತು.ಒಟ್ಟು 24 ಜಿಲ್ಲೆಗಳ ಪೈಕಿ ಬೊಕಾರೊ, ರಾಂಚಿ, ಸಿಂದೇಗ, ಚಾತ್ರ ಮತ್ತು ಧನಬಾದ್‌ ಸೇರಿ 10 ಜಿಲ್ಲೆಗಳಲ್ಲಿ ಬಂದ್‌ ಸಂಪೂರ್ಣ ಯಶಸ್ವಿ­ಯಾಯಿತು. ಇನ್ನುಳಿದ ಜಿಲ್ಲೆಗಳಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾ­ಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.