ಜಾರ್ಖಂಡ್ ಚಾಂಪಿಯನ್ಸ್

7

ಜಾರ್ಖಂಡ್ ಚಾಂಪಿಯನ್ಸ್

Published:
Updated:

ಬೆಂಗಳೂರು: ಜಾರ್ಖಂಡ್ ತಂಡದವರು ಒಂಬತ್ತನೇ ಅಖಿಲ ಭಾರತ ಬಿ.ಎಸ್.ಎನ್.ಎಲ್. ಹಾಕಿ ಟೂರ್ನಿ ಪ್ರಶಸ್ತಿಯನ್ನು ಸತತ ಮೂರು ಬಾರಿ ಗೆದ್ದುಕೊಂಡು ‘ಹ್ಯಾಟ್ರಿಕ್’ ಸಾಧನೆಗೆ ಪಾತ್ರರಾದರು.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ತಂಡದವರು ತಮ್ಮ ಖ್ಯಾತಿಗೆ ತಕ್ಕಂತೆ ಆಟವಾಡಿ ಆತಿಥೇಯ ಕರ್ನಾಟಕ ತಂಡವನ್ನು 4-0 ಗೋಲುಗಳಿಂದ ಸೋಲಿಸಿದರು.ಮಿಂಚಿನ ಆಟವಾಡಿದ ಸುಧೀರ್ ಬೇಂಗ್ರ ಹ್ಯಾಟ್ರಿಕ್ ಸೇರಿದಂತೆ ನಾಲ್ಕು ಗೋಲುಗಳಿಸಿ ತಮ್ಮ ತಂಡದ ಗೆಲುವಿನ ರೂವಾರಿ ಆದರು.ಈ ಟೂರ್ನಿಯಲ್ಲಿ ಬೇಂಗ್ರ ಹ್ಯಾಟ್ರಿಕ್‌ಗಳಿಸಿದ ಏಕೈಕ ಆಟಗಾರರೆಂಬ ಗೌರವಕ್ಕೆ ಪಾತ್ರರಾದರು. ಕರ್ನಾಟಕ ತಂಡ ಮೂರು ಬಾರಿಯೂ ಫೈನಲ್‌ನಲ್ಲಿ ಪರಸ್ಪರ ಎದುರಾಳಿಗಳಾಗಿದ್ದರು.ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಒರಿಸ್ಸಾ ತಂಡದವರು 3-0 ಗೋಲುಗಳಿಂದ ದೆಹಲಿಯ ಎನ್.ಟಿ.ಆರ್. ತಂಡವನ್ನು ಮಣಿಸಿದರು. ವಿಜಯಿ ತಂಡದ ಆರ್. ಎಕ್ಕಾ, ಸಂತೋಷ್ ಕುಮಾರ್, ಅನೂಪ್ ಅನುರಂಜನ್ ಎಕ್ಕಾ ಗೋಲು ತಂದಿತ್ತರು.ಬಿ.ಎಸ್.ಎನ್.ಎಲ್. ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ದಾಸ್ ಅವರು ಬಹುಮಾನ ವಿತರಣೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry