ಭಾನುವಾರ, ನವೆಂಬರ್ 17, 2019
29 °C

ಜಾರ್ಖಂಡ್: ಪ್ರಣವ್ ಬೆಂಬಲಿಸಿದ ಬಿಜೆಪಿ ಮಿತ್ರಪಕ್ಷಗಳು

Published:
Updated:

ರಾಂಚಿ (ಐಎಎನ್‌ಎಸ್): ಜಾರ್ಖಂಡ್‌ನಲ್ಲಿ ಆಡಳಿತಾರೂಢ ಬಿಜೆಪಿಯ ಮೂರು ಮಿತ್ರಪಕ್ಷಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರನ್ನು ಬೆಂಬಲಿಸುವ ನಿರ್ಧಾರಕ್ಕೆ ಬಂದಿವೆ.ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಅಖಿಲ ಜಾರ್ಖಂಡ್ ವಿದ್ಯಾರ್ಥಿಗಳ ಒಕ್ಕೂಟ (ಎಜೆಎಸ್‌ಯು) ಪ್ರಣವ್ ಅವರನ್ನು ಬೆಂಬಲಿಸಲು ನಿರ್ಧರಿಸಿವೆ. ಜೊತೆಗೆ ಜಾರ್ಖಂಡ್‌ನ ಅಬಕಾರಿ ಸಚಿವರೂ ಸೇರಿದಂತೆ ಇಬ್ಬರು ಜೆಡಿಯು ಶಾಸಕರು ಯುಪಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಕಳೆದ ವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದಾರೆ.ಜಾರ್ಖಂಡ್ ಶಾಸನಸಭೆಯಲ್ಲಿ ಜೆಎಂಎಂ 18 ಶಾಸಕರನ್ನು ಮತ್ತು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತಲಾ ಒಬ್ಬರು ಸದಸ್ಯರನ್ನು ಹೊಂದಿದೆ. ಎಜೆಎಸ್‌ಯ ಆರು ಶಾಸಕರು ಇದ್ದಾರೆ.

ಪ್ರತಿಕ್ರಿಯಿಸಿ (+)