ಶುಕ್ರವಾರ, ಜನವರಿ 24, 2020
27 °C

ಜಾಲಿ ಬಾರಿಗೆ ಭಟ್ಟರ ಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಲಿ ಬಾರಿಗೆ ಭಟ್ಟರ ಹಾಡು

‘ಗರ್ವ’ ವೆಂಕಟೇಶ್, ಟಿ.ಎನ್. ನಾಗೇಶ್ ಮತ್ತು ಮುರಳಿಕೃಷ್ಣ  ನಿರ್ಮಿಸುತ್ತಿರುವ ‘ಜಾಲಿ ಬಾರು ಮತ್ತು ಪೋಲಿ ಹುಡುಗರು‘ ಚಿತ್ರಕ್ಕಾಗಿ ಯೋಗರಾಜ್‌ಭಟ್ ಬರೆದಿರುವ ‘ಏನ್ಮಾಡ್ಲಿ ಡಾಕ್ಟ್ರೆ ಏನ್ಮಾಡ್ಲಿ ಈ ನಡುವೆ ಹೆಲ್ತ್ ಸರಿ ಇಲ್ಲ ಮನಸಿಗೆ ಏಕೋ ನೆಮ್ಮದಿ ಇಲ್ಲ’ ಎಂಬ ಹಾಡಿನ ಚಿತ್ರೀಕರಣ ಅಬ್ಬಗೆರೆ ಬಳಿಯ ರಾಜೇಶ್ವರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಹಾಡಿಗೆ ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನ ಮಾಡಿದ್ದಾರೆ.ಶ್ರೀಧರ್ ಈ ಚಿತ್ರದ ನಿರ್ದೇಶಕರು. ವಿಷ್ಣುವರ್ಧನ್ ಛಾಯಾಗ್ರಹಣ, ವೀರಸಮರ್ಥ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣ (ಮದರಂಗಿ), ಮಾನ್ಸಿ, ಮಾನಸಿ, ಕಲ್ಯಾಣಿ, ಮೈಕೋ ನಾಗರಾಜ್, ಜಹಾಂಗೀರ್, ಮಾಧವ, ಶ್ರೇಯಸ್, ವಿಜಯಗೋಪಾಲ್, ಸೌಜನ್ಯ, ಮಾನಸ ಶೆಟ್ಟಿ ಮುಂತಾದವರಿದ್ದಾರೆ.

‘ದಿಲ್‌ರಂಗೀಲಾ’ ಚಿತ್ರಕ್ಕೆ ರೀರೆಕಾರ್ಡಿಂಗ್

ಕೆ. ಮಂಜು ನಿರ್ಮಿಸುತ್ತಿರುವ ‘ದಿಲ್‌ರಂಗೀಲಾ’ ಚಿತ್ರಕ್ಕೆ ಮಾತಿನ ಜೋಡಣೆ ಮುಕ್ತಾಯವಾಗಿದೆ. ಅರ್ಜುನ್‌ಜನ್ಯ ಸ್ಟುಡಿಯೊದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ. ಚಿತ್ರ ಜನವರಿಯಲ್ಲಿ ಬಿಡುಗಡೆಯಾಗುತ್ತಿದೆ.ಗಣೇಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ಪ್ರೀತಂಗುಬ್ಬಿ ನಿರ್ದೇಶಿಸುತ್ತಿದ್ದಾರೆ. ರಚಿತಾರಾಂ, ಪ್ರಿಯಾಂಕಾ ರಾವ್, ದತ್ತಣ್ಣ, ರಂಗಾಯಣರಘು, ಅಚ್ಯುತಕುಮಾರ್, ಯಮುನ, ಶ್ರೀನಿಧಿ, ಗಿರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)