ಜಾಹೀರಾತು: ಉದ್ಯೋಗ ಪರ್ವ

7

ಜಾಹೀರಾತು: ಉದ್ಯೋಗ ಪರ್ವ

Published:
Updated:

ಐ ಲವ್ ಯೂ... ರಸ್ನಾ

        ***

ಸರ್ಫ್ ಕಿ ಖರೀಧಾರಿ ಮೇ ಸಮಜ್ದಾರಿ ಹೈ

        ***

ಬೀವಿ ಸೆ ಸಚ್ ಮುಚ್ ಕರೆ ಪ್ಯಾರ್, ವೋ ಪ್ರೆಸ್ಟೀಜ್ ಸೆ ಕೈಸೆ ಕರೆ ಇನ್‌ಕಾರ್

        ***

ದಶಕಗಳ ಹಿಂದೆ ರೇಡಿಯೊ ಹಾಗೂ ಟಿ.ವಿ ಮಾಧ್ಯಮಗಳಲ್ಲಿ ಕೇಳುತ್ತಿದ್ದ ಹಾಗೂ ನೋಡುತ್ತಿದ್ದ ಜಾಹೀರಾತುಗಳು ಇವು. ಇಂಥ ವಾಕ್ಯಗಳು ನಮಗೇ ಅರಿವಿಲ್ಲದಂತೆ ಸರಕುಗಳನ್ನು ಖರೀದಿಸುವಾಗ ಗುನುಗುನಿಸುವಂತೆ ಮಾಡುತ್ತವೆ.ಕಂಪೆನಿಗಳು ಕೆಲವೇ ಕೆಲವು ಶಬ್ದಗಳನ್ನು ಬಳಸಿ ಜನರನ್ನು ಸೆಳೆದು ತಮ್ಮ ಗ್ರಾಹಕರಿಗೆ ಸರಕಿನ ಬಗ್ಗೆ ವಿವರಣೆ ಕೊಡುತ್ತವೆ. ಇದು ಸೃಜನಶೀಲ ಹಾಗೂ ಕ್ರಿಯಾತ್ಮಕ ಬರಹಗಾರರಿಂದ ಮಾತ್ರ ಸಾಧ್ಯ.ಇಂದು ಜಾಹೀರಾತು ಲೋಕ ಯಾವುದನ್ನೂ ಬಿಟ್ಟಿಲ್ಲ. ಎಲ್ಲೆಂದರೆ ಅಲ್ಲಿ ಜಾಹೀರಾತು ಹಾಕುವ ಕಂಪೆನಿಗಳಿವೆ. ಜಾಹೀರಾತಿಗೆ ವೆಚ್ಚ ಮಾಡುವುದರಲ್ಲಿ ಭಾರತ ವಿಶ್ವ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇದೆ. ಹಾಗಾದರೆ ನಿಮಗೂ ಇದರಲ್ಲಿ ಆಸಕ್ತಿ ಇದೆಯೇ?ಯಾವುದೇ ಸರಕಿರಲಿ ಅದರ ಬಗ್ಗೆ ಸರಿಯಾಗಿ ಮಾಹಿತಿ ತಿಳಿದುಕೊಂಡು, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಜನರ ಮನ ಮುಟ್ಟುವಂತೆ ಬರೆಯಬೇಕು. ಇದಕ್ಕೆ ಪೂರಕವಾಗಿ ಪ್ರಾದೇಶಿಕ ಭಾಷೆಯ ಜ್ಞಾನದೊಂದಿಗೆ ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ ಕೂಡ ಅತ್ಯವಶ್ಯಕ. ಇದಕ್ಕೆ ಸಂಬಂಧಪಟ್ಟ ಕೋರ್ಸ್‌ಗಳು ಬೆಂಗಳೂರು ಸೇರಿದಂತೆ ಎಲ್ಲ ಮಹಾನಗರಗಳಲ್ಲೂ ಲಭ್ಯವಿವೆ.  ಅವುಗಳನ್ನು ಮಾಡಿಕೊಂಡವರಿಗೆ ದೇಶ ವಿದೇಶಗಳಲ್ಲಿ ಉದ್ಯೋಗಾವಕಾಶಗಳು ಕೈ ಬೀಸಿ ಕರೆಯುತ್ತಿವೆ. ಟಿ.ವಿ., ರೇಡಿಯೊ, ದಿನಪತ್ರಿಕೆಗಳು, ರಸ್ತೆಯ ಮೇಲಿನ ಬೋರ್ಡ್‌ಗಳು, ಬೃಹತ್ ಹೋರ್ಡಿಂಗ್‌ಗಳ ಮೂಲಕ ಜನರನ್ನು ಆಕರ್ಷಿಸುವ ಬರವಣಿಗೆ ಹೊಂದಿದವರಿಗೆ ಭಾರಿ ಬೇಡಿಕೆ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry