ಶನಿವಾರ, ಆಗಸ್ಟ್ 24, 2019
23 °C

ಜಾಹೀರಾತು ಫ್ಲೆಕ್ಸ್‌ಗಳ ತೆರವು

Published:
Updated:

ಬೆಂಗಳೂರು: ನಗರದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಜಾಹೀರಾತು ವಿಭಾಗದ ಸಿಬ್ಬಂದಿ, ಜಾಹೀರಾತು ಶುಲ್ಕ ಪಾವತಿಸದ ಕಂಪೆನಿಗಳು ಬಸ್ ತಂಗುದಾಣದಲ್ಲಿ ಅಳವಡಿಸಿದ್ದ ಜಾಹೀರಾತಿನ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು.`ಶುಲ್ಕ ಪಾವತಿಸದ ಕಾರಣ 178 ಬಸ್ ತಂಗುದಾಣಗಳ ಜಾಹೀರಾತಿನ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ಮೂಲಕ ರೂ. 1.3 ಕೋಟಿ ಜಾಹೀರಾತು ಶುಲ್ಕ ಸಂಗ್ರಹವಾಗಿದೆ. ನಗರದಲ್ಲಿ 7 ಕಂಪೆನಿಗಳು ಒಟ್ಟು ರೂ.28 ಕೋಟಿ ಜಾಹೀರಾತು ಶುಲ್ಕ ಬಾಕಿ ಉಳಿಸಿಕೊಂಡಿವೆ. ರಿಲಯನ್ಸ್ ಆ್ಯಡ್ಸ್ ರೂ.12.25 ಕೋಟಿ ಮತ್ತು ಒಒಎಚ್ ಟೈಮ್ಸ ಕಂಪೆನಿಯು ರೂ.10.71 ಕೋಟಿ ಬಾಕಿ ಉಳಿಸಿಕೊಂಡಿದೆ. ಬಾಕಿ ಪಾವತಿಗೆ ಈ ಕಂಪೆನಿಗಳಿಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ' ಎಂದು ಜಾಹೀರಾತು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)