ಜಾಹೀರಾತು ಬೆಡಗಿ ಶ್ರುತಿ ಸರೌಗಿ

7

ಜಾಹೀರಾತು ಬೆಡಗಿ ಶ್ರುತಿ ಸರೌಗಿ

Published:
Updated:

ನಗರದ ಬಿಷಪ್ ಕಾಟನ್ ಗರ್ಲ್ಸ್ ಕಾಲೇಜಿನಲ್ಲಿ ಕಾನೂನು ಪದವಿ ಅಭ್ಯಾಸ ಮಾಡುತ್ತಿರುವ ಮುಂಬೈನ ಶ್ರುತಿ ಸರೌಗಿ ಅವರಿಗೆ ರೂಪದರ್ಶಿಯಾಗುವ ಬಯಕೆ ಮನದಲ್ಲಿ ಮನೆ ಮಾಡಿತ್ತು. ಆದರೆ ಅದಕ್ಕೆ ತಣ್ಣೀರೆರಚಿದ್ದು ಅವರ ಎತ್ತರ. ಆದರೂ ಮುಖದ ಸೌಂದರ್ಯದಿಂದ ಹೊರಾಂಗಣ ಜಾಹೀರಾತಿನಲ್ಲಿ ಅವಕಾಶ ಒಲಿದುಬಂತು. ಎರಡು ವರ್ಷಗಳಿಂದ ಮುದ್ರಣ ಜಾಹೀರಾತು ಕ್ಷೇತ್ರದಲ್ಲಿ ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿದೆ. ಹೊರಾಂಗಣ ಜಾಹೀರಾತು ಕ್ಷೇತ್ರದ ತಮ್ಮ ಪಯಣವನ್ನು ಜಿಂಕೆ ಕಂಗಳ ಶ್ರುತಿ ಸರೌಗಿ `ಮೆಟ್ರೊ'ದೊಂದಿಗೆ ಹಂಚಿಕೊಂಡರು.

ಮುದ್ರಣ ಜಾಹೀರಾತಿಗೆ ಪ್ರವೇಶಿಸಿದ್ದು?

ರೂಪದರ್ಶಿಯಾಗಿ ಮಿಂಚಬೇಕೆಂದುಕೊಂಡಿದ್ದೆ. ಆದರೆ ಎತ್ತರ ಕಡಿಮೆ ಇರುವ ಕಾರಣಕ್ಕಾಗಿ ರ‌್ಯಾಂಪ್ ಮಾಡೆಲಿಂಗ್ ಕ್ಷೇತ್ರ ದೂರವಾಯಿತು. ಮೊದಲಿಗೆ ಅವಕಾಶ ಸಿಕ್ಕಿದ್ದು ಮೈಸೂರು ಸಿಲ್ಕ್ಸ್ ಸೀರೆಯ ಹೋಲ್ಡಿಂಗ್ಸ್ ಜಾಹೀರಾತಿಗೆ. ನಂತರ ಮೈಸೂರು ಸ್ಯಾಂಡಲ್ ಸೋಪ್, ಅನ್‌ಟಕ್ಡ್ ಡಾಟ್ ಕಾಮ್‌ನ ಕ್ಯಾಟ್‌ಲಾಗ್ ಹಾಗೂ ಕೇರಳದ ರೇಡಿಯೊ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಜಾಹೀರಾತಿಗಾಗಿ ಬಣ್ಣ ಹಚ್ಚಿದೆ. ಹೀಗೆ ಸಹವೃತ್ತಿ ಪಯಣ ಸಾಗಿತು.ಊರು, ಹವ್ಯಾಸ?

ನನ್ನೂರು ಮುಂಬೈ. ಮೂರು ವರ್ಷಗಳ ಹಿಂದೆ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದೆ. ಸಂಗೀತ ಕೇಳುವುದು, ಸ್ನೇಹಿತರೊಂದಿಗೆ ಹರಟೆ ಹೊಡೆಯುವುದು. ಪಾರ್ಟಿಗಳಿಗೆ ಹೋಗುವುದು.ಫ್ಯಾಷನ್ ಮಂತ್ರ?

ಪ್ರತಿದಿನ ಧರಿಸುವ ಬಟ್ಟೆಯಲ್ಲೇ ಫ್ಯಾಷನ್ ಕಾಣುತ್ತೇನೆ. ಫಿಟ್ ಆಗುವ ಬಟ್ಟೆ ಧರಿಸಬೇಕು. ಜೊತೆಗೆ ಆಲಂಕಾರಿಕ ಒಡವೆಗಳು ಇಷ್ಟವಾಗುತ್ತವೆ. ಫ್ಯಾಷನ್ ಅಂದ್ರೆ ಗ್ಲಾಮರ್.ಮುದ್ರಣ ಜಾಹೀರಾತು ಬಗ್ಗೆ?

ಚೆನ್ನಾಗಿದೆ. ಒಂದೇ ಜಾಗದಲ್ಲಿ ಶೂಟ್ ನಡೆಯುತ್ತದೆ. ಒಂದು ಜಾಹೀರಾತಿಗೆ ಹತ್ತಾರು ಭಂಗಿಯಲ್ಲಿ ಫೋಟೊಗೆ ಸಿದ್ಧರಾಗಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ಅವಕಾಶ ಹೆಚ್ಚಾಗಿದೆ. ಇನ್ನೂ ಕಲಿಯಬೇಕಾದ್ದು ಬಹಳಷ್ಟಿದೆ.ನೆಚ್ಚಿನ ವಿನ್ಯಾಸಕರು ಯಾರು?

ಮನೀಷ್ ಮಲ್ಹೋತ್ರ. ಏಕೆಂದರೆ ಅವರ ವಿಭಿನ್ನ ಶೈಲಿಯ ವಿನ್ಯಾಸ ಇಷ್ಟವಾಗುತ್ತದೆ.ಈ ಕ್ಷೇತ್ರದಲ್ಲೇ ಮುಂದುವರೆಯಬೇಕು ಎಂದುಕೊಂಡಿದ್ದೀರಾ?

ಎಲ್ಲಿಯವರೆಗೆ ಅವಕಾಶದ ಬಾಗಿಲು ತೆರೆದಿರುತ್ತದೆಯೋ ಅಲ್ಲಿಯವರೆಗೆ ಮಾಡುತ್ತೇನೆ. ಇದೇ ಕ್ಷೇತ್ರದಲ್ಲಿ ಮುಂದುವರೆಯುವ ಆಸೆ ನನ್ನದು.ಮನೆಯವರ ಪ್ರೋತ್ಸಾಹ ಹೇಗಿದೆ?

ಅಪ್ಪ, ಅಮ್ಮ ಇಬ್ಬರೂ ಪ್ರೋತ್ಸಾಹ ನೀಡುತ್ತಾರೆ. ಹಾಗಾಗಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.ಸಿನಿಮಾದಿಂದ ಅವಕಾಶ ಬಂದಿದೆಯಾ?

ಮಲಯಾಳಂ ಸಿನಿಮಾವೊಂದಕ್ಕೆ ಅವಕಾಶ ಬಂದಿತ್ತು. ಆದರೆ ನಾನು ನಿರಾಕರಿಸಿದೆ. ಕಾರಣ ವಿದ್ಯಾಭ್ಯಾಸ. ಕಾನೂನು ಪದವಿ ಮುಗಿದ ಮೇಲೆ ಸಿನಿಮಾ ಕಡೆ ಆಲೋಚಿಸುತ್ತೇನೆ. ಅಲ್ಲಿಯವರೆಗೆ ಸಿನಿಮಾ ಕಡೆ ಮುಖ ಮಾಡುವುದಿಲ್ಲ.ನಿಮ್ಮ ಕನಸು, ಮುಂದಿನ ಯೋಜನೆ?

ದೊಡ್ಡ, ದೊಡ್ಡ ಕಂಪೆನಿಗಳ ಬ್ರಾಂಡ್‌ಗಳಿಗೆ ಅದರಲ್ಲೂ ಪ್ರಸಿದ್ಧ ಬಟ್ಟೆ ಬ್ರಾಂಡ್‌ಗಳಿಗೆ ರೂಪದರ್ಶಿಯಾಗಬೇಕು. ಈ ಮಾಡೆಲಿಂಗ್ ಕ್ಷೇತ್ರದಲ್ಲಿಯೇ ಭವಿಷ್ಯ ಕಂಡುಕೊಳ್ಳಬೇಕು. ಎತ್ತರ ಇಲ್ಲವೆಂಬ ಕಾರಣದಿಂದ ಕೈತಪ್ಪಿದ ರ‌್ಯಾಂಪ್ ಮಾಡೆಲಿಂಗ್ ಜಾಗವನ್ನು ಈ ಜಾಹೀರಾತು ಕ್ಷೇತ್ರ ತುಂಬಲಿದೆ. ಇದುವರೆಗೆ ಅಂದಾಜು 15 ಬ್ರಾಂಡ್‌ಗಳಿಗೆ ರೂಪದರ್ಶಿಯಾಗಿ ಮಿಂಚಿದ್ದೇನೆ.ಬೆಂಗಳೂರು ಬಗ್ಗೆ ನಿಮ್ಮ ಅನಿಸಿಕೆ?

ವಿದ್ಯಾಭ್ಯಾಸಕ್ಕಾಗಿ ಉದ್ಯಾನ ನಗರಿಗೆ ಬಂದ ನನಗೆ ಮೊದಲು ಬೇಸರವಾಗುತ್ತಿತ್ತು. ಸಂಚಾರದಟ್ಟಣೆ ಕಿರಿಕಿರಿಯಾಗಿತ್ತು. ಆದರೆ ಇಲ್ಲಿನ ವಾತಾವರಣ ಇಷ್ಟವಾಯಿತು. ಐ ಲೈಕ್ ಬೆಂಗಳೂರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry