ಜಾಹೀರಾತು ಲೋಕಕ್ಕೆ ಮತ್ತೆ ಐಶ್ವರ್ಯಾ

7

ಜಾಹೀರಾತು ಲೋಕಕ್ಕೆ ಮತ್ತೆ ಐಶ್ವರ್ಯಾ

Published:
Updated:
ಜಾಹೀರಾತು ಲೋಕಕ್ಕೆ ಮತ್ತೆ ಐಶ್ವರ್ಯಾ

ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಮುದ್ದಾದ ಹೆಣ್ಣು ಮಗುವಿನ ತಾಯಿಯಾದ ಬಳಿಕ ಮತ್ತೆ ಜಾಹೀರಾತು ಲೋಕದತ್ತ ಕಣ್ಣು ನೆಟ್ಟಿದ್ದಾರೆ. `ಕಲ್ಯಾಣ್ ಜ್ಯುವೆಲರ್ಸ್‌~ನ ಬ್ರಾಂಡ್ ಅಂಬಾಸಿಡರ್ ಆಗಿ ಐಶೂ ಆಯ್ಕೆಯಾಗಿದ್ದಾರೆ.

`ಅಂತರರಾಷ್ಟ್ರೀಯ ಖ್ಯಾತಿಯ ನಟಿ ನಮ್ಮ ಉತ್ಪನ್ನದ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಈ ಜಾಹೀರಾತಿಗೆ ಕಲ್ಯಾಣ್ ಒಂದೂವರೆ ಕೋಟಿ ರೂಪಾಯಿ ವ್ಯಯಿಸುತ್ತಿದೆ. ಈ ಆಭರಣವನ್ನು ಅಂತರರಾಷ್ಟ್ರೀಯ ವಿನ್ಯಾಸಕಾರರು ರೂಪುಗೊಳಿಸಿದ್ದು, ಇನ್ನೂ 15 ವಿನ್ಯಾಸಗಳು ಅಂತಿಮ ಹಂತದಲ್ಲಿವೆ. ಈ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಂದಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್‌ ಅತ್ಯುತ್ತಮ ಆಭರಣ ಸಂಗ್ರಹ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಶುದ್ಧತೆಗೆ ಹೆಸರಾದ ಕಲ್ಯಾಣ್, ಮುಂದಿನ ದಿನಗಳಲ್ಲಿ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ~ ಎಂಬ ವಿಶ್ವಾಸ ಸಂಸ್ಥೆಯ ನಿರ್ದೇಶಕ ಟಿ.ಎಸ್. ಕಲ್ಯಾಣರಾಮನ್ ಅವರದು.

ಅಮ್ಮನಾದ ಮೇಲೆ ಮೊದಲ ಬಾರಿ ಕ್ಯಾಮೆರಾ ಎದುರಿಸುತ್ತಿರುವ ಐಶ್ವರ್ಯಾ ಹೊಸ ಗೆಟಪ್‌ನಲ್ಲಿ  ಕಾಣಿಸಿಕೊಳ್ಳಲಿದ್ದಾರೆ. ಕಲ್ಯಾಣ್‌ನ ಪ್ರಚಾರ ರಾಯಭಾರಿಗಳಾದ ದಕ್ಷಿಣ ಭಾರತದ ಹೆಸರಾಂತ ನಟರಾದ ನಾಗಾರ್ಜುನ, ಪ್ರಭು, ಶಿವರಾಜ್ ಕುಮಾರ್, ಮಮ್ಮುಟ್ಟಿ ಹಾಗೂ ದಿಲೀಪ್ ಸಾಲಿಗೆ ಐಶ್ವರ್ಯಾ ರೈ ಬಚ್ಚನ್ ಸೇರಿದಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry