ಜಾಹೀರಾತು: ವಿಫುಲ ಅವಕಾಶ

7

ಜಾಹೀರಾತು: ವಿಫುಲ ಅವಕಾಶ

Published:
Updated:
ಜಾಹೀರಾತು: ವಿಫುಲ ಅವಕಾಶ

ಹುಬ್ಬಳ್ಳಿ: ‘ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಜಾಹೀರಾತು ಕ್ಷೇತ್ರದ ಮಾರುಕಟ್ಟೆ ವ್ಯಾಪಕವಾಗಿದ್ದು, ಉದ್ಯೋಗ ಅವಕಾಶಗಳು ಹೆಚ್ಚುತ್ತ ಲಿವೆ. ಎಂ.ಬಿ.ಎ. ವಿದ್ಯಾರ್ಥಿಗಳು ಇಂಥ ಅವಕಾಶಗಳನ್ನು ಸದುಪ ಯೋಗ ಪಡಿಸಿಕೊಳ್ಳಬೇಕು’ ಎಂದು ಕವಿವಿಯ ಎಂ.ಬಿ.ಎ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್. ಸುಭಾಷ ಸಲಹೆ ನೀಡಿದರು.ನಗರದ ಕೆಎಲ್‌ಇ ಐ.ಎಂ.ಎಸ್.ಆರ್. ಸಂಸ್ಥೆಯಲ್ಲಿ ಈಚೆಗೆ ಜರುಗಿದ ‘ಬಂಬೂಜಲ್’ ರಾಷ್ಟ್ರಮಟ್ಟದ ಜಾಹೀರಾತು ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ಗಳು ಕೇವಲ ಬಿಜಿನೆಸ್ ಮ್ಯಾನೇಜರ್‌ಗಳಾಗದೇ ಕ್ರಿಯೇಟಿವ್ ಮ್ಯಾನೇಜರ್ ಆಗಿ ದೇಶದ ಆರ್ಥಿಕ ವ್ಯವಸ್ಥೆಗೆ ಅಮೂಲ್ಯ ಕೊಡುಗೆ ನೀಡಬೇಕು ಎಂದು ತಿಳಿಸಿದರು.ಮುಂಬೈನ ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆಯ ಡಾ. ಸತ್ಯಜೀತ್ ಮಜುಮದಾರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಜಾಹಿರಾತುಗಳು ಕೇವಲ ಗ್ರಾಹಕರನ್ನು ಆಕರ್ಷಿಸುವ ಬದಲು, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತಿರಬೇಕು ಎಂದು ತಿಳಿಸಿದರು. ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಸ್.ಸಿ. ಮೆಟಗುಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸ ಲಾಯಿತು. ಬೆಂಗಳೂರಿನ ಅಮೇತಿ ಮ್ಯಾನೇಜ್‌ಮೆಂಟ್ ಕಾಲೇಜಿಗೆ ವೀರಾಗ್ರಣಿ ಪ್ರಶಸ್ತಿ ಲಭಿಸಿತು.ಡಾ.ಪಿ.ಬಿ. ರೂಡಗಿ ಸ್ವಾಗತಿಸಿದರು. ಪ್ರೊ. ಅಂಜನಾ ಬಸನಗೌಡರ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಚಿನ್ಮಯ ನೀಲಕಣಿ ಹಾಗೂ ಕೆಮೆಲೋ ನಿರೂಪಿಸಿದರು. ಪ್ರೊ. ಸುಪ್ರಿಯಾ ಹೊಸಕೇರಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry