ಭಾನುವಾರ, ಏಪ್ರಿಲ್ 11, 2021
33 °C

ಜಿಆರ್‌ಟಿಇ ಸಂಸ್ಥಾಪನಾ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಭಾರತೀಯರು ವಿದೇಶದಲ್ಲಿ ಕೆಲಸ ಮಾಡುವಾಗ ಹೊಂದಿರುವಷ್ಟೇ ಸಮರ್ಪಣಾಭಾವ ಮತ್ತು ಕಠಿಣ ಪರಿಶ್ರಮದ ಗುಣವನ್ನು ದೇಶದಲ್ಲಿ ದುಡಿಯುವಾಗಲೂ ಹೊಂದಿರಬೇಕು~ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ನೇಮಕಾತಿ ಕೇಂದ್ರದ ಅಧ್ಯಕ್ಷ ಡಾ. ಡಿ.ಎನ್. ರೆಡ್ಡಿ ಅಭಿಪ್ರಾಯಪಟ್ಟರು.ಡಿಆರ್‌ಡಿಒ ಅಂಗಸಂಸ್ಥೆಯಾದ ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟ್ಯಾಬ್ಲಿಷ್‌ಮೆಂಟ್ (ಜಿಟಿಆರ್‌ಇ) ಘಟಕದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, `ಸಂಸ್ಥೆಯ ಯುವ ವಿಜ್ಞಾನಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಅವರನ್ನು ಪ್ರೋತ್ಸಾಹಿಸುವ ಅಗತ್ಯವಿದೆ~ ಎಂದು ಹೇಳಿದರು.ವಿಜ್ಞಾನಿಗಳಾದ ಅಜಿತ್ ಕುಮಾರ್ ಮತ್ತು ಕೆ. ಧರ್ಮೇಂದ್ರ ಸಿಂಗ್ ಪ್ರಸಕ್ತ ಸಾಲಿನ `ಪ್ರಯೋಗಾಲಯ ವಿಜ್ಞಾನಿ~ ಪ್ರಶಸ್ತಿ ಹಂಚಿಕೊಂಡರು. `ಪ್ರಯೋಗಾಲಯದ ತಂತ್ರಜ್ಞ ಪ್ರಶಸ್ತಿ~ ಅಶೋಕಕುಮಾರ್ ಅವರ ಪಾಲಾಯಿತು. ಐಟಿಟಿ ಗುಂಪು `ತಂಡ ಪ್ರಶಸ್ತಿ~ ಗೆದ್ದುಕೊಂಡಿತು.ಜಿಟಿಆರ್‌ಇ ನಿರ್ದೇಶಕ ಡಾ. ಸಿ.ಪಿ. ರಾಮನಾರಾಯಣನ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವವನ್ನೂ ಏರ್ಪಡಿಸಲಾಗಿತ್ತು. ಹಿರಿಯ ನಟ ರಾಜೇಶ್, ಕರವೇ ಅಧ್ಯಕ್ಷ ನಾರಾಯಣಗೌಡ, ಗಾಯಕ ಅಪ್ಪಗೆರೆ ತಿಮ್ಮರಾಜು ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಆವರಣದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.