ಶನಿವಾರ, ಮೇ 8, 2021
27 °C

ಜಿಇ ಪುಟಾಣಿ ವಿಜ್ಞಾನಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನರಲ್ ಎಲೆಕ್ಟ್ರಿಕ್ಸ್ (ಜಿಇ) ವಿದ್ಯುತ್ ಸಾಧನಗಳ ಕ್ಷೇತ್ರದಲ್ಲಿ ಅತಿ ದೊಡ್ಡ ಹೆಸರು. `ಜಿಇ- ದಿ ಜಾನ್ ಎಫ್. ವೆಲ್ಚ್ ಟೆಕ್ನಾಲಜಿ ಸೆಂಟರ್~ (ಜಿಇ-ಜೆಎಫ್‌ಡಬ್ಲ್ಯೂಟಿಸಿ) ವಿಶ್ವದ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಲ್ಲೊಂದು.ಅದು ವಾರ್ಷಿಕ ಸಮುದಾಯ ದಿನಾಚರಣೆ ಅಂಗವಾಗಿ ನಗರದಲ್ಲಿ 10ನೇ ವರ್ಷದ `ಪ್ರಬೋಧನ~ (ಎನ್‌ಲೈಟ್‌ಮೆಂಟ್) ಎಂಬ ವಿಜ್ಞಾನ ಹಬ್ಬವನ್ನು ನಡೆಸಿತು. ಇಲ್ಲಿ ಬಡ ಮತ್ತು ಸೌಲಭ್ಯ ವಂಚಿತ ಕುಟುಂಬಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈಜ್ಞಾನಿಕ ಪ್ರತಿಭೆ ಪ್ರದರ್ಶಿಸಿದರು. ಇವರೆಲ್ಲ ಸರ್ಕಾರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಶಾಲಾ ಮಕ್ಕಳು.ಕಡಿಮೆ ಮಾಡುವುದು, ಪುನರ್ಬಳಕೆ ಹಾಗೂ ಪರಿಷ್ಕರಣೆ ಎಂಬುದು ಈ ವರ್ಷದ ಘೋಷಣೆ. ಇದನ್ನು ಮನದಲ್ಲಿಟ್ಟುಕೊಂಡು ಮಕ್ಕಳು ಅನೇಕ ಮಾದರಿಗಳನ್ನು ಪ್ರದರ್ಶಿಸಿದರು. ಇದು ಮಕ್ಕಳಲ್ಲಿ ಅಡಗಿದ್ದ ಸುಪ್ತ ಪ್ರತಿಭೆಯ ಅನಾವರಣಕ್ಕೆ ಸಹಕಾರಿಯಾಯಿತು. ಮಾದರಿ ಪ್ರದರ್ಶನಗಳ ಜೊತೆಗೆ ಬಹುಭಾಷಾ ಪ್ರಬಂಧ ಸ್ಪರ್ಧೆಯೂ ನಡೆಯಿತು.10ನೇ ವರ್ಷಾಚರಣೆ ಸಂಭ್ರದಲ್ಲಿದ್ದ ಜಿಇ ಉದ್ಯೋಗಿ ಸ್ವಯಂ ಸೇವಕರುಇಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಖುಷಿಯಿಂದ ಬೆರೆತರು. ಜೊತೆಗೆ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನದ ಅರಿವು ಹೆಚ್ಚಿಸುವಲ್ಲಿ ನೆರವಾದರು. ಇದು ಮಕ್ಕಳಿಗೆ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಿಳಿದುಕೊಳ್ಳಲು ಸಹಕಾರಿಯಾಯಿತು.ನಲ್ಲೂರಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ `ಮಾದರಿ ಹಳ್ಳಿ~ ಮಾದರಿಗೆ ಪ್ರಥಮ ಬಹುಮಾನ, ಬಸವನಗರ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ `ಮಣ್ಣಿನ ಸವಕಳಿ~ ಕುರಿತ ಮಾದರಿಗೆ ದ್ವಿತೀಯ ಬಹುಮಾನ ಹಾಗೂ ಕೃಷಿಯಲ್ಲಿ ತಾಜ್ಯ ನಿರ್ವಹಣೆ (ವೇಸ್ಟ್ ಮ್ಯಾನೇಜ್‌ಮೆಂಟ್) ಕುರಿತು ಮಾದರಿ ಪ್ರದರ್ಶಿಸಿದ ಡಿವೈನ್ ಲೈಟ್ ಟ್ರಸ್ಟ್ ಫಾರ್ ದಿ ಬ್ಲೈಂಡ್ ಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ, ಬಹುಮಾನ ಗಿಟ್ಟಿಸಿಕೊಂಡರು.ರೆಡ್ಯೂಸ್, ರೀ-ಯೂಸ್, ರೀ-ಸೈಕಲ್ ಕುರಿತ ಭಿತ್ತಿಪತ್ರ ಸ್ಪರ್ಧೆಯಲ್ಲಿ ಪರಿಕ್ರಮ ಶಾಲೆ, ನಲ್ಲೂರಹಳ್ಳಿ ಸರ್ಕಾರಿ ಶಾಲೆ ಹಾಗೂ ಶೈಲಾ ಕೊತ್ವಾಲ ಇನ್‌ಸ್ಟಿಟ್ಯೂಟ್ ಕ್ರಮವಾಗಿ ಮೊದಲ ಮೂರು ಸ್ಥಾನ ಸ್ಥಾನ ಪಡೆದುಕೊಂಡವು.`ವಿಜ್ಞಾನ ಹಾಗೂ ಆವಿಷ್ಕಾರದ ಬಗ್ಗೆ ಒಲವು ಹೊಂದಿರುವ ವಿದ್ಯಾರ್ಥಿಗಳನ್ನು ನಾವು ಸದಾ ಪ್ರೋತ್ಸಾಹಿಸುತ್ತಾ ಬರುತ್ತಿದ್ದೇವೆ. ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿದ್ದೇವೆ. ವಿಜ್ಞಾನ ಪ್ರದರ್ಶನದಲ್ಲಿ ಮಕ್ಕಳು ಖುಷಿಯಿಂದ ಭಾಗವಹಿಸುವ ಮೂಲಕ ಜ್ಞಾನ ಹಂಚಿಕೆ ಮಾಡಿಕೊಳ್ಳುತ್ತಿದ್ದಾರೆ.ನಾವು ಈ ಬಾರಿ ಕೊಟ್ಟ ರೆಡ್ಯೂಸ್, ರೀ-ಯೂಸ್, ರೀ-ಸೈಕಲ್ ಎಂಬ ಸಂಗತಿಯಿಂದ ವಿದ್ಯಾರ್ಥಿಗಳು ಮುಂದೆ ಪರಿಸರದೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಂಡರು~ ಎಂದರು ಜಿಇ ಗ್ಲೋಬಲ್ ರೀಸರ್ಚ್ ಕಮ್ಯುನಿಕೇಷನ್ಸ್ ಲೀಡರ್ ಗರಿಮಾ ವರ್ಮಾ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.