ಜಿಎಸ್‌ಎಂ ಗ್ರಾಹಕರ ಸಂಖ್ಯೆ 67.44ಕೋಟಿ

7

ಜಿಎಸ್‌ಎಂ ಗ್ರಾಹಕರ ಸಂಖ್ಯೆ 67.44ಕೋಟಿ

Published:
Updated:

ಜಿಎಎಸ್‌ಎಂ ಚಂದಾದಾರರ ಸಂಖ್ಯೆ ಆಗಸ್ಟ್‌ನಲ್ಲಿ 17.8 ಲಕ್ಷದಷ್ಟು ಏರಿಕೆ ಕಂಡಿದ್ದು ಒಟ್ಟು ಬಳಕೆದಾರರ ಸಂಖ್ಯೆ 67.44 ಕೋಟಿ ದಾಟಿದೆ ಎಂದು ಭಾರತೀಯ ಮೊಬೈಲ್‌ ದೂರವಾಣಿ ಸೇವಾ ಸಂಸ್ಥೆಗಳ ಒಕ್ಕೂಟ (ಸಿಒಎಐ) ಹೇಳಿದೆ.ಜುಲೈ ಅಂತ್ಯಕ್ಕೆ ದೇಶದಲ್ಲಿ 67.26 ಕೋಟಿ ‘ಜಿಎಸ್‌ಎಂ’ ಚಂದಾದಾ­ರರಿದ್ದರು. ಆಗಸ್ಟ್‌ನಲ್ಲಿ ಏರ್‌ಸೆಲ್‌ ಕಂಪೆನಿ ತನ್ನ ಸೇವಾ ವ್ಯಾಪ್ತಿಗೆ ಹೊಸದಾಗಿ 8.76 ಲಕ್ಷ ಬಳಕೆದಾರರನ್ನು ಸೇರಿಸಿ­ಕೊಂಡು ಒಟ್ಟು ಸಂಖ್ಯೆಯನ್ನು 6.26 ಕೋಟಿಗೆ ಹೆಚ್ಚಿಸಿಕೊಂಡಿದೆ. ಏರ್‌ಟೆಲ್‌ ಚಂದಾದಾರರ ಸಂಖ್ಯೆ  8.33 ಲಕ್ಷದಷ್ಟು ಹೆಚ್ಚಿದ್ದು, ಒಟ್ಟು ಸಂಖ್ಯೆ 19.22 ಕೋಟಿಗೇರಿದೆ. ಏರ್‌ಟೆಲ್‌ ಮಾರುಕಟ್ಟೆ ಪಾಲು ಸಹ ಶೇ 28.50ಕ್ಕೆ ಜಿಗಿದಿದೆ. ಐಡಿಯಾ ಸೆಲ್ಯುಲರ್‌ ಗ್ರಾಹಕರ ಸಂಖ್ಯೆ 7.52 ಲಕ್ಷದಷ್ಟು ಹೆಚ್ಚಿದ್ದು 12.60 ಕೋಟಿಗೆ ಏರಿಕೆ ಕಂಡಿದೆ. ವೊಡಾ­ಫೋನ್‌ ತನ್ನ ಸೇವಾ ವ್ಯಾಪ್ತಿಗೆ ಹೊಸದಾಗಿ 85 ಸಾವಿರ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದೆ. ಕಂಪೆನಿ ಶೇ 22.88ರಷ್ಟು ಮಾರುಕಟ್ಟೆ ಪಾಲು ಕಾಯ್ದುಕೊಂಡಿದ್ದು ಒಟ್ಟಾರೆ ಗ್ರಾಹಕರ ಸಂಖ್ಯೆ 15.43 ಕೋಟಿ ದಾಟಿದೆ. ವಿಡಿಯೊ­ಕಾನ್‌ 1.58 ಲಕ್ಷ ಗ್ರಾಹಕ­ರನ್ನು ಹೊಸದಾಗಿ ಗಳಿಸಿಕೊಂಡಿದ್ದು, ಬಳಕೆ ದಾರರ ಸಂಖ್ಯೆ 29.29 ಲಕ್ಷಕ್ಕೇರಿದೆ.ಯುನಿನಾರ್‌  5 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದು, ಚಂದಾದಾರರ ಸಂಖ್ಯೆ ಆಗಸ್ಟ್ ಅಂತ್ಯಕ್ಕೆ 3.22 ಕೋಟಿಗೆ ತಗ್ಗಿದೆ. ‘ಎಂಟಿಎನ್‌ಎಲ್‌’ ಗ್ರಾಹಕರ ಸಂಖ್ಯೆಯೂ 2.48 ಲಕ್ಷದಷ್ಟು ತಗ್ಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry