ಜಿಎಸ್‌ಎಂ ಗ್ರಾಹಕ ಸಂಖ್ಯೆ 67 ಕೋಟಿ!

7

ಜಿಎಸ್‌ಎಂ ಗ್ರಾಹಕ ಸಂಖ್ಯೆ 67 ಕೋಟಿ!

Published:
Updated:
ಜಿಎಸ್‌ಎಂ ಗ್ರಾಹಕ ಸಂಖ್ಯೆ 67 ಕೋಟಿ!

ಕಳೆದ ಏಪ್ರಿಲ್‌ನಲ್ಲಿ ದೇಶದ `ಜಿಎಸ್‌ಎಂ~(ಗ್ಲೋಬಲ್ ಸಿಸ್ಟಂ ಫಾರ್ ಮೊಬೈಲ್ ಕಮ್ಯುನಿಕೇಷನ್) ಸೇವಾ ವ್ಯಾಪ್ತಿಗೆ 65ಲಕ್ಷ ಗ್ರಾಹಕರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.ಇದರಲ್ಲಿ ಸಿಂಹಪಾಲು ಏರ್‌ಟೆಲ್‌ಗೆ. 20 ಲಕ್ಷ ಗ್ರಾಹಕರು ಏರ್‌ಟೆಲ್ ಜಾಲಕ್ಕೆ ಬಂದಿದ್ದು, ಅದರ ಒಟ್ಟು ಚಂದಾದಾರರ ಸಂಖ್ಯೆ 18.33 ಕೋಟಿಗೆ ಏರಿದೆ ಎಂದು ಭಾರತೀಯ ಮೊಬೈಲ್ ದೂರವಾಣಿ ಸೇವಾ ಸಂಸ್ಥೆಗಳ ಒಕ್ಕೂಟ(ಸಿಒಎಐ) ಹೇಳಿದೆ.ಏಪ್ರಿಲ್ ಅಂತ್ಯಕ್ಕೆ ದೇಶದ ಒಟ್ಟು `ಜಿಎಸ್‌ಎಂ~ ಬಳಕೆದಾರರ ಸಂಖ್ಯೆ 67.05 ಕೋಟಿ ದಾಟಿದೆ. ಇದೇ ಅವಧಿಯಲ್ಲಿ ದೇಶದ 3ನೇ ಅತಿ ದೊಡ್ದ ದೂರವಾಣಿ ಸೇವಾ ಸಂಸ್ಥೆ ವೊಡಾಫೋನ್ 8.1 ಲಕ್ಷ ಚಂದಾದಾರರನ್ನು ಹೊಸದಾಗಿ ಸೇರ್ಪಡೆಮಾಡಿಕೊಂಡಿದ್ದು, ಅದರ ಒಟ್ಟು ಗ್ರಾಹಕರ ಸಂಖ್ಯೆ 15.13 ಕೋಟಿಗೆ ಹೆಚ್ಚಿದೆ. `ಟ್ರಾಯ್~ ಅಂಕಿ-ಅಂಶ ಪ್ರಕಾರ ಮಾರ್ಚ್ ಅಂತ್ಯಕ್ಕೆ ದೇಶದ ಒಟ್ಟು ಮೊಬೈಲ್ ಚಂದಾದಾರರ ಸಂಖ್ಯೆ (`ಜಿಎಸ್‌ಎಂ~ ಮತ್ತು `ಸಿಡಿಎಂಎ~ ಸೇರಿ) 91.90 ಕೋಟಿಗೆ ಏರಿದೆ.         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry