`ಜಿಎಸ್‌ಎಂ' ಬಳಕೆದಾರರ ಸಂಖ್ಯೆ 66ಕೋಟಿಗೆ ಇಳಿಕೆ

7

`ಜಿಎಸ್‌ಎಂ' ಬಳಕೆದಾರರ ಸಂಖ್ಯೆ 66ಕೋಟಿಗೆ ಇಳಿಕೆ

Published:
Updated:

 ನವದೆಹಲಿ (ಪಿಟಿಐ): ಭಾರ್ತಿ ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲರ್ ಸೇರಿದಂತೆ ವಿವಿಧ ಮೊಬೈಲ್ ಸೇವಾ ಸಂಸ್ಥೆಗಳು ನವೆಂಬರ್‌ನಲ್ಲಿ ಒಟ್ಟು 90 ಲಕ್ಷ `ಜಿಎಸ್‌ಎಂ' ಗ್ರಾಹಕರನ್ನು ಕಳೆದುಕೊಂಡಿವೆ. ಹಾಗಾಗಿ ದೇಶದಲ್ಲಿನ ಒಟ್ಟು `ಜಿಎಸ್‌ಎಂ' ಮೊಬೈಲ್ ಸೇವೆ ಬಳಕೆದಾರರ ಸಂಖ್ಯೆ 66.38 ಕೋಟಿಗೆ ತಗ್ಗಿದೆ ಎಂದು  ಭಾರತೀಯ ಮೊಬೈಲ್ ದೂರವಾಣಿ ಸೇವಾ ಸಂಸ್ಥೆಗಳ ಒಕ್ಕೂಟ (ಸಿಒಎಐ) ಹೇಳಿದೆ. ಅಕ್ಟೋಬರ್ ಅಂತ್ಯದ ವೇಳೆ 67.28 ಲಕ್ಷ`ಜಿಎಸ್‌ಎಂ' ಬಳಕೆದಾರರಿದ್ದರು. 


ಭಾರ್ತಿ ಏರ್‌ಟೆಲ್, ವೊಡಾಫೋನ್ ಮತ್ತು   ಐಡಿಯಾ ಸೆಲ್ಯುಲರ್ ಶೇ 67ರಷ್ಟು `ಜಿಎಸ್‌ಎಂ' ಮಾರುಕಟ್ಟೆ ಪಾಲು ಹೊಂದಿವೆ. ಏರ್‌ಸೆಲ್ ಮತ್ತು ಯುನಿನಾರ್ ಕ್ರಮವಾಗಿ 14.60 ಲಕ್ಷ ಮತ್ತು 4.37 ಲಕ್ಷ `ಜಿಎಸ್‌ಎಂ' ಗ್ರಾಹಕರನ್ನು ಕಳೆದುಕೊಂಡಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry