ಜಿಎಸ್‌ಎಲ್‌ವಿ–ಡಿ5 ಉಪಗ್ರಹ ಉಡಾವಣೆಗೆ ಕ್ಷಣಗಣನೆ

5

ಜಿಎಸ್‌ಎಲ್‌ವಿ–ಡಿ5 ಉಪಗ್ರಹ ಉಡಾವಣೆಗೆ ಕ್ಷಣಗಣನೆ

Published:
Updated:

ಚೆನ್ನೈ(ಪಿಟಿಐ): ಇತ್ತೀಚಿಗಷ್ಟೇ ಮಂಗಳ­ಯಾನ ಯೋಜನೆಯನ್ನು ಯಶಸ್ವಿ­­ಯಾಗಿ ನಿರ್ವಹಿಸಿದ ಭಾರತೀಯ ಬಾಹ್ಯಾ­­ಕಾಶ ಸಂಸ್ಥೆ (ಇಸ್ರೊ) ಈಗ ಮರು ನವೀಕರಣಗೊಂಡಿರುವ ಜಿಎಸ್‌­ಎಲ್‌ವಿ–ಡಿ5 ಉಡಾವಣೆಗೆ ಸಿದ್ಧಗೊಂಡಿದೆ.ಆಂಧ್ರಪ್ರದೇಶದ ಶ್ರೀಹರಿಕೋಟಾ­ದಲ್ಲಿರುವ ಸತೀಶ್ ಧವನ್ ಬಾಹ್ಯಾ­ಕಾಶ ಕೇಂದ್ರದಿಂದ ಭಾನುವಾರ ಸಂಜೆ 4:18ಕ್ಕೆ ಜಿಎಸ್‌ಎಲ್‌ವಿಡಿ–5 ರಾಕೆಟ್‌ ಉಡಾವಣೆಗೊಳ್ಳಲಿದ್ದು, ಶನಿ­ವಾರ ಬೆಳಿಗ್ಗೆ 11:18ಕ್ಕೆ ಕ್ಷಣಗಣನೆ ಆರಂಭವಾಗಿದೆ.‘ಸಂವಹನ ಉಪಗ್ರಹ ಜಿಸ್ಯಾಟ್–14 ಹೊತ್ತೊಯ್ಯಲಿರುವ 1980 ಕೆಜಿ ತೂಕದ ’ಜಿಎಸ್‌ಎಲ್‌ವಿಡಿ­–­5’ನ ಉಡಾ­ವಣೆಗೆ 29 ಗಂಟೆಗಳ ಕ್ಷಣ­ಗಣನೆ ಇಡಲಾಗಿದೆ. ಎಲ್ಲಾ ಕಾರ್ಯ­ಗಳು ಸಮಗ್ರವಾಗಿ ನಡೆಯುತ್ತಿವೆ’ ಎಂದು ಇಸ್ರೊ ವಕ್ತಾರ ದೇವಿ ಪ್ರಸಾದ್ ಕಾರ್ಣಿಕ್ ಸುದ್ದಿಸಂಸ್ಥೆ ಗೆ ತಿಳಿಸಿದ್ದಾರೆ.ಸ್ವದೇಶಿ ನಿರ್ಮಿತ ಕ್ರಯೊಜೆನಿಕ್‌ ಎಂಜಿನ್‌ ಬಳಸಿ ಜಿಎಸ್‌ಎಲ್‌ವಿ–ಡಿ5 ಉಪಗ್ರಹವನ್ನು ಕಳೆದ ವರ್ಷ ಆಗಸ್ಟ್‌ 19ರಂದು ಉಡಾವಣೆಗೆ ಸಿದ್ಧತೆ ಮಾಡಿ­ಕೊಳ್ಳಲಾಗಿತ್ತು. ಆದರೆ ರಾಕೆಟ್‌ನ ಎರಡನೇ ಹಂತದಲ್ಲಿ ಇಂಧನ ಸೋರಿಕೆಯಾದ ಕಾರಣ ಉಡಾವಣೆ ಸ್ಥಗಿತಗೊಳಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry