ಭಾನುವಾರ, ಜೂನ್ 20, 2021
28 °C

ಜಿಎಸ್‌ಬಿ ವಿರುದ್ಧ ಚೆನ್ನಿಗಪ್ಪ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರಟಗೆರೆ: ಬಿಜೆಪಿ ನಿಯೋಜಿತ ಅಭ್ಯರ್ಥಿ ಜಿ.ಎಸ್.­ಬಸವರಾಜು ವಿರುದ್ಧ ಮಾಜಿ ಸಚಿವ ಸಿ.ಚೆನ್ನಿಗಪ್ಪ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಗುರುವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಸಂಸದ ಬಸವ­ರಾಜು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿದ ಅವರು, ಪ್ರಸ್ತುತ ಎಲ್ಲ ಪಕ್ಷಗಳ ನಾಯಕ­ರಾಗಿದ್ದಾರೆ ಎಂದರು.ಕಾಂಗ್ರೆಸ್‌ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರ ವಿರುದ್ಧವೂ ಹರಿಹಾಯ್ದರು.ಅಭ್ಯರ್ಥಿ ಎ.ಕೃಷ್ಣಪ್ಪ ಮಾತನಾಡಿ, ನೆರೆಯ ದೇಶ­ಗಳು ದೇಶದ ಮೇಲೆ ಆಕ್ರಮಣ ನಡೆಸಿದರೂ; ಯುಪಿಎ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಕಿಡಿ­ಕಾರಿದ ಅವರು, ಮೋದಿ ಗಾಳಿ ಪಟ ಇದ್ದಂತೆ. ಗಾಳಿ ಬಂದಾಗಷ್ಟೇ ಹಾರುತ್ತದೆ ಎಂದು ಛೇಡಿಸಿದರು.ಶಾಸಕ ಪಿ.ಆರ್.ಸುಧಾಕರ್‌ಲಾಲ್ ಮಾತ­ನಾಡಿ ಕೆಲ ಅಧಿಕಾರಿಗಳು ಕಾಂಗ್ರೆಸ್‌ನ ಏಜೆಂಟ­ರಂತೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್‌.­ಹುಲಿನಾಯ್ಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಾಕಮ್ಮ, ಮಾಜಿ ಶಾಸಕ ಗಂಗಹನುಮಯ್ಯ, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಬೆಳ್ಳಿ ಲೋಕೇಶ್, ಮುಖಂಡರಾದ ಜೆ.ಎನ್.­ನರಸಿಂಹ­ರಾಜು, ರಂಗಮುತ್ತಯ್ಯ, ಎಲ್.­ರಾಜಣ್ಣ, ಮಹಾಲಿಂಗಪ್ಪ, ಕೆರೆಯಾಗಲಹಳ್ಳಿ ಲಕ್ಷ್ಮಣ್, ಜಿ.ಜೆ.ರಾಜಣ್ಣ, ಕುಸುಮಾ, ದಾಕ್ಷಾಯಿಣಿ ರಾಜಣ್ಣ, ಕ್ಯಾಶವಾರ ಹನುಮಂತರಾಯಪ್ಪ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.