ಜಿಕೆವಿಕೆ ಆವರಣದಲ್ಲಿ ನ.7ರಿಂದ ಕೃಷಿಮೇಳ

7

ಜಿಕೆವಿಕೆ ಆವರಣದಲ್ಲಿ ನ.7ರಿಂದ ಕೃಷಿಮೇಳ

Published:
Updated:

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ನವೆಂಬರ್ 7 ರಿಂದ 11 ರವರೆಗೆ ಅಂತರರಾಷ್ಟ್ರೀಯ ಮಟ್ಟದ ಕೃಷಿ ಮೇಳವನ್ನು ಜಿಕೆವಿಕೆ ಆವರಣದಲ್ಲಿ ಆಯೋಜಿಸಿದೆ.ಮೇಳದಲ್ಲಿ ಸಾವಯವ ಕೃಷಿ,ಕೃಷಿ ಯಂತ್ರೋಪಕರಣಗಳ ಪ್ರದರ್ಶನ ನಡೆಯಲಿದೆ. ಕೃಷಿ  ಹಾಗೂ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಬಹುದು. ತಂತ್ರಜ್ಞಾನ, ಪರಿಕರ, ಸೇವಾ ಸೌಲಭ್ಯವನ್ನು ಪ್ರದರ್ಶಿಸಲು ಇಚ್ಛಿಸುವವರು ಅಕ್ಟೋಬರ್ 30ರ ಒಳಗೆ ಹೆಸರು ನೋಂದಾಯಿಸಿ, ಮಳಿಗೆ ಕಾದಿರಿಸಬಹುದು.ಮಾಹಿತಿಗೆ: ವಿಸ್ತರಣಾ ನಿರ್ದೇಶಕ, ಕೃಷಿ ವಿವಿ, ಹೆಬ್ಬಾಳ. ದೂರವಾಣಿ- 2341 8883, 2351 6353.

www.uasbanglore.edu.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry