ಜಿಗಳೂರು ಕಾಲೇಜು ಸಮಗ್ರ ಚಾಂಪಿಯನ್

7

ಜಿಗಳೂರು ಕಾಲೇಜು ಸಮಗ್ರ ಚಾಂಪಿಯನ್

Published:
Updated:

ಧಾರವಾಡ: ಇಲ್ಲಿಯ ಶ್ರೀ ಸತ್ಯಸಾಯಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ವಿಜಾಪುರದ ಮಹಿಳಾ ವಿ.ವಿ. ಕಳೆದ ಅ 9ರಿಂದ ಆಯೋಜಿಸಿದ್ದ ಅಂತರ್ ಕಾಲೇಜು ಯುವಜನೋತ್ಸವ ದಲ್ಲಿ ನಗರದ ಶ್ರೀಮತಿ ಕೆ.ಎಸ್.ಜಿಗಳೂರು ಕಲಾ ಹಾಗೂ ವಾಣಿಜ್ಯ ಕಾಲೇಜು ಎಲ್ಲ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಪಡೆಯಿತು.ಮೊದಲ ರನ್ನರ್ ಅಪ್ ಆಗಿ ಹುಬ್ಬಳ್ಳಿಯ ಎಸ್‌ಜೆಎಂವಿಎಸ್ ಮಹಿಳಾ ಕಾಲೇಜು ಹಾಗೂ ಎರಡನೇ ರನ್ನರ್ ಅಪ್ ಆಗಿ ಆತಿಥೇಯ ಸತ್ಯಸಾಯಿ ಮಹಿಳಾ ಗೃಹ ವಿಜ್ಞಾನ ಕಾಲೇಜು ಆಯ್ಕೆಯಾಯಿತು.ಚಾಂಪಿಯನ್ ಪ್ರಶಸ್ತಿ ಪಡೆದಿದ್ದರಿಂದ ಸಹಜವಾಗಿಯೇ ಉತ್ಸಾಹದ ಬುಗ್ಗೆಯಾಗಿದ್ದ ಜಿಗಳೂರು ಮಹಿಳಾ ಕಾಲೇಜಿನ ಅಂದದ ವಿದ್ಯಾರ್ಥಿನಿಯರು ಪ್ರಶಸ್ತಿ ಪಡೆದ ಬಳಿಕ ವೇದಿಕೆಯಲ್ಲೇ ನೃತ್ಯ ಮಾಡಿ ಸಂತಸ ಹಂಚಿಕೊಂಡರು.ಸ್ಪರ್ಧೆಗಳ ಫಲಿತಾಂಶ:

ಸಂಗೀತ: ವಿ.ಜಿ.ಮಹಿಳಾ ಕಾಲೇಜು ಗುಲ್ಬರ್ಗ (ಪ್ರಥಮ), ಶ್ರೀ ಸತ್ಯಸಾಯಿ ಮಹಿಳಾ ಗೃಹ ವಿಜ್ಞಾನ ಕಾಲೇಜು (ರನ್ನರ್); ನೃತ್ಯ: ಕೆ.ಎಸ್.ಜಿಗಳೂರು ಮಹಿಳಾ ಕಾಲೇಜು ಧಾರವಾಡ, ವಿ.ಜಿ. ಮಹಿಳಾ ಕಾಲೇಜು, ಗುಲ್ಬರ್ಗ ಹಾಗೂ ರಾಜ ರಾಜೇಶ್ವರಿ ಮಹಿಳಾ ಕಾಲೇಜು, ರಾಣೆಬೆನ್ನೂರು (ಚಾಂಪಿಯನ್), ಎಸ್‌ಜೆಎಂವಿಎಸ್ ಮಹಿಳಾ ಕಾಲೇಜು ಹುಬ್ಬಳ್ಳಿ (ರನ್ನರ್); ಸಾಹಿತ್ಯಿಕ ಸ್ಪರ್ಧೆಗಳು: ಎಸ್‌ಜೆಎಂವಿಎಸ್ ಮಹಿಳಾ ಕಾಲೇಜು (ಚಾಂಪಿಯನ್), ಶ್ರೀ ಸತ್ಯಸಾಯಿ ಮಹಿಳಾ ಗೃಹ ವಿಜ್ಞಾನ ಕಾಲೇಜು (ರನ್ನರ್); ನಾಟಕ ವಿಭಾಗ: ಕೆ.ಎಸ್.ಜಿಗಳೂರು ಮಹಿಳಾ ಕಾಲೇಜು (ಚಾಂಪಿಯನ್), ಶ್ರೀ ಸತ್ಯಸಾಯಿ ಮಹಿಳಾ ಗೃಹ ವಿಜ್ಞಾನ ಕಾಲೇಜು (ರನ್ನರ್); ಲಲಿತ ಕಲೆ: ಕೆ.ಎಸ್.ಜಿಗಳೂರು ಮಹಿಳಾ ಕಾಲೇಜು (ಚಾಂಪಿಯನ್), ಎಸ್‌ಜೆಎಂವಿಎಸ್ ಮಹಿಳಾ ಕಾಲೇಜು (ರನ್ನರ್).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry