ಭಾನುವಾರ, ಆಗಸ್ಟ್ 18, 2019
22 °C

ಜಿಟಿ ಜಿಟಿ ಮಳೆ: ಅಸ್ತವ್ಯಸ್ತ

Published:
Updated:

ಬೀದರ್: ನಗರದಲ್ಲಿ ಬುಧವಾರ ಬಿಟ್ಟುಬಿಡದೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು.ಮಂಗಳವಾರ ರಾತ್ರಿ ಶುರುವಾದ ಮಳೆ ಬುಧವಾರ ದಿನವಿಡೀ ಮುಂದುವರಿದಿತ್ತು. ಹೀಗಾಗಿ ಸಾರ್ವಜನಿಕರು ಮಳೆಯಲ್ಲಿಯೇ ನಿತ್ಯದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಯಿತು.ಬೆಳಿಗ್ಗೆಯಿಂದ ಸಂಜೆವರೆಗೂ ಮಳೆ ವಿರಾಮ ಕೊಡದೆ ಕೆಲವೊಮ್ಮೆ ಜಿಟಿ ಜಿಟಿಯಾಗಿ ಮತ್ತೆ ಕೆಲವೊಮ್ಮೆ ಧಾರಾಕಾರವಾಗಿ ಸುರಿಯಿತು.

ಮಳೆಯ ಜೊತೆಗೆ ವಾತಾವರಣವೂ ತಂಪಾಗಿತ್ತು.ಬೆಳಿಗ್ಗೆ ಮಳೆಯಲ್ಲಿಯೇ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದುದು ಕಂಡು ಬಂದಿತು. ಸರ್ಕಾರಿ ನೌಕರರು, ವ್ಯಾಪಾರಿಗಳು ಕೊಡೆ, ಜರ್ಕಿನ್ ನೆರವಿನೊಂದಿಗೆ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು.  ಮಳೆಯಿಂದಾಗಿ ಅನೇಕರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು. ಪ್ರಮುಖ ರಸ್ತೆಗಳಲ್ಲಿ ವಾಹನ ಮತ್ತು ಜನ ಸಂಚಾರ ವಿರಳವಾಗಿತ್ತು.ನಗರದ ಕೆಇಬಿ ರಸ್ತೆ, ಚಿದ್ರಿ ರಸ್ತೆ, ನೆಹರು ಕ್ರೀಡಾಂಗಣ ಮಾರ್ಗ, ಫತೇ ದರ್ವಾಜಾ ಮತ್ತಿತರ ರಸ್ತೆಗಳಲ್ಲಿ ನೀರು ನಿಂತ ದೃಶ್ಯ ಕಂಡು ಬಂದಿತ್ತು.

Post Comments (+)